ಸವಣೂರು :ಪಾಲ್ತಾಡಿ ಗ್ರಾಮದ ಚೆನ್ನಾವರ -ಬೇರಿಕೆಗೆ ಸುಳ್ಯ ಶಾಸಕ ಎಸ್ ಅಂಗಾರ ಅವರು ಬರಪರಿಹಾರ ನಿಧಿಯಿಂದ ತುರ್ತಾಗಿ ಕೊಳವೆ ಬಾವಿ ಕೊರೆಯಿಸಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿದ ಯೋಜನೆಯನ್ನು ಲೋಕಾರ್ಪಣೆ ಮಾಡಲಾಯಿತು.
ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿ, ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.ಪರಸ್ಪರ ಸಹಕಾರ ಮನೋಭಾವನೆಯಿಂದ ಮುಂದುವರಿದಾಗ ಎಲ್ಲಾ ಸಮಸ್ಯೆಗಳೂ ದೂರವಾಗುತ್ತದೆ.ಕುಡಿಯುವ ನೀರಿನ ಯೋಜನೆಯ ಬಳಕೆಯಲ್ಲೂ ಪರಸ್ಪರ ಸಹಕಾರದಿಂದ ಎಲ್ಲರಿಗೂ ಯೋಜನೆಯ ಪ್ರಯೋಜನ ದೊರಕುವಂತಾಗಬೇಕು ಎಂದರು.
ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬಿ.ಕೆ,ಸದಸ್ಯರಾದ ಸತೀಶ್ ಅಂಗಡಿಮೂಲೆ,ಜಯಂತಿ ಮಡಿವಾಳ ಹಾಗೂ ಸ್ಥಳೀಯರಾದ ನಿತೇಶ್ ಮಡಿವಾಳ,ಹರೀಶ್ ಮಡಿವಾಳ,ಗಂಗಾಧರ ಬೇರಿಕೆ,ಸಫಿಯಾ ಬೇರಿಕೆ,ತಾಹಿರಾ, ರೇವತಿ, ಚಂದ್ರಾವತಿ, ದಮಯಂತಿ, ದೇವಪ್ಪ, ಅಬೂಬಕ್ಕರ, ಜಗದೀಶ್, ಬಾಬು, ಮೋನಪ್ಪ ನಾಯ್ಕ,ನವೀನ್ ಜೆ,ಜಗನ್ನಾಥ ರೈ,ಭರತ್ ಕುಮಾರ್,ಸುನಿಲ್,ಉಮೇಶ್,ವನಿತಾ,ಪುಷ್ಪಾ, ಕವಿತಾ,ಸುಶೀಲಾ,ಕೃಷ್ಣಪ್ಪ ಮೊದಲಾದವರಿದ್ದರು.
ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಚೆನ್ನಾವರ ಸ್ವಾಗತಿಸಿ,ವಂದಿಸಿದರು.