ಚೊಕ್ಕಾಡಿಯಲ್ಲಿ ರಕ್ತದಾನ ಶಿಬಿರ

June 21, 2019
12:30 PM

ಚೊಕ್ಕಾಡಿ: ಶ್ರೀರಾಮ ಸೇವಾ ಸಮಿತಿ ಮತ್ತು ಚೊಕ್ಕಾಡಿ ಹವ್ಯಕ ವಲಯದ ಆಶ್ರಯದಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸಹಯೋಗದೊಂದಿಗೆ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಪ್ರಾಯೋಜಕತ್ವದೊಂದಿಗೆ ಶ್ರೀರಾಮ ದೇವಾಲಯದಲ್ಲಿ  ರಕ್ತದಾನ ಶಿಬಿರ ನಡೆಯಿತು.

Advertisement

ಶಿಬಿರ ಉದ್ಘಾಟಿಸಿದ ಉಪ್ಪಿನಂಗಡಿ ಹವ್ಯಕ ಮಹಾಮಂಡಲದ ಅಧ್ಯಕ್ಷ ಅಶೋಕ ಕೆದಿಲ,’ ದಾನಗಳಲ್ಲಿ ಶ್ರೇಷ್ಠವಾದ ದಾನವೇ ರಕ್ತದಾನ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಲ್ಲ ಕಾರ್ಯ ರಕ್ತದಾನವಾಗಿದೆ. ಆರೋಗ್ಯಕ್ಕೂ ರಕ್ತದಾನ ಒಳ್ಳೆಯದು’ ಎಂದು  ಹೇಳಿದರು.

Advertisement

ರಕ್ತದಾನ ಶಿಬಿರದ ರೂವಾರಿ ಜಿಲ್ಲಾ ಗೃಹರಕ್ಷಕ ದಳದ ಮುಖ್ಯ ಸಮಾದೇಷ್ಠ ಮುರಳಿಮೋಹನ್ ಚೂಂತಾರು ಮಾತನಾಡಿ ಪಟ್ಟಣಗಳಲ್ಲಿ ರಕ್ತದಾನಗಳು ಸದಾ ನಡೆಯುತ್ತಲೇ ಇರುತ್ತದೆ. ಆದರೆ ಹಳ್ಳಿಗಳು ಹಾಗು ತೀರಾ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ರಕ್ತದಾನದ ಅವಶ್ಯಕತೆ, ಉಪಯೋಗದ ಅರಿವು ಇರುವುದಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರಬೇಕು ಎಂದು ಹೇಳಿದರು.

50ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾರ್ಯಕ್ರಮದಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮೀನಾರಾಯಣ ಭಟ್ ಚೂಂತಾರು, ಹವ್ಯಕ ಮಹಾಮಂಡಲ ವಲಯ ಅಧ್ಯಕ್ಷ ಸುರೇಶ್ಚಂದ್ರ ಕಲ್ಮಡ್ಕ, ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಶ್ರೀರಾಮ ದೇವಾಲಯದ ಅಧ್ಯಕ್ಷ ಮಹೇಶ್ ಭಟ್ ಚೂಂತಾರು, ಮಂಗಳೂರು ವೆನ್‍ಲಾಕ್ ಆಸ್ಪತ್ರೆಯ ವೈದ್ಯಾಧಿಕಾರಿ ಹಾಗು ತಂತ್ರಜ್ಞ ಡಾ| ಆಂಟೊನಿ ಉಪಸ್ಥಿತರಿದ್ದರು.

ಬೆಳಾಲು ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.

Advertisement

 

Advertisement
Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸಂಪಾಜೆಯಲ್ಲಿ ಆಟಿ ಕೂಟ | ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ
August 4, 2025
7:09 PM
by: The Rural Mirror ಸುದ್ದಿಜಾಲ
ತಾಳೆ ಬೆಳೆ ಕೃಷಿ | ಅಡಿಕೆಯ ಪರ್ಯಾಯ ಬೆಳೆಯ ಬಗ್ಗೆ ಮಾಹಿತಿ
July 12, 2025
11:32 AM
by: The Rural Mirror ಸುದ್ದಿಜಾಲ
ಶಕ್ತಿ ವಸತಿ ಶಾಲೆಯಲ್ಲಿ ಗುರು ಪೂರ್ಣಿಮೆ | ದೇವರು ಹಾಗೂ ಗುರು ಇಬ್ಬರೂ ಪೂಜೆಗೆ ಯೋಗ್ಯ
July 10, 2025
8:04 PM
by: The Rural Mirror ಸುದ್ದಿಜಾಲ
33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ
July 1, 2025
11:37 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group