ಸುಳ್ಯ: ಎಸ್ ಕೆ ಎಸ್ ಎಸ್ ಎಫ್ ಕೇಂದ್ರ ಸಮಿತಿಯ ನಿರ್ದೇಶನದಂತೆ ಪ್ರತಿಯೊಂದು ಜಿಲ್ಲೆಯಲ್ಲಿಯೂ ಜನವರಿ 26 ರ ಪ್ರಜಾಪ್ರಭುತ್ವ ದಿನದಂದು ಎಸ್ ಕೆ ಎಸ್ ಎಸ್ ಎಫ್ ಮಾನವ ಸರಪಳಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ದ,ಕ,ಜಿಲ್ಲೆಯಲ್ಲಿ ಈ ಬಾರಿ ವಿಟ್ಲದಲ್ಲಿ ನಡೆಯಲಿದೆ.
ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕಿನ ಎಲ್ಲ ವಿಖಾಯ ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಅಜ್ಜಾವರ ಖತೀಬ್ ಉಮ್ಮರ್ ಫೈಝಿ ವಿಖಾಯ ಕಾರ್ಯಕರ್ತರಿಗೆ ಕರೆ ನೀಡಿದರು.
ಅವರು ಸುಳ್ಯದ ಸುಪ್ರೀಂ ಕಂಪೌಂಡ್ ನಲ್ಲಿ ನಡೆದ ವಿಖಾಯ ಕಾರ್ಯಕರ್ತರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಳ್ಯ ಎಸ್ ಕೆ ಎಸ್ ಎಸ್ ಎಫ್ ಅಧ್ಯಕ್ಷರಾದ ಹಸ್ಸನ್ ಆರ್ಷದಿ, ಮದ್ರಸಾ ಮೆನೇಜ್ ಮೆಂಟ್ ಅಧ್ಯಕ್ಷರಾದ
ತಾಜ್ ಮಹಮ್ಮದ್ ಸಂಪಾಜೆ, ಸುನ್ನಿ ಮಹಲ್ ಫೆಡರೇಷನ್ ಸುಳ್ಯ ಇದರ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ, ಎಸ್ ವೈ ಎಸ್ ಅಧ್ಯಕ್ಷರಾದ ಹಮೀದ್ ಹಾಜಿ ಸುಳ್ಯ, ಬೆಳ್ಳಾರೆ ಶಂಸುಲ್ ಉಲಮಾ ಟ್ರಸ್ಟ್ ಅಧ್ಯಕ್ಷರಾದ ಮಂಗಳ ಅಬೂಬಕ್ಕರ್, ಸುಪ್ರೀಂ ಅಹಮದ್ ಹಾಜಿ
ವಿಖಾಯ ಎಕ್ಟೀವ್ ವಿಂಗ್ ಸದಸ್ಯ ಆಶಿಕ್ ಸುಳ್ಯ , ರಝಾಕ್ ಉಸ್ತಾದ್ ಅಜ್ಜಾವರ , ಶಾಫಿ ಮುಕ್ರಿ,ಫಾರೂಕ್ ಅಡ್ಕ
ಕಲಂದರ್ ಎಲಿಮಲೆ, ಷರೀಫ್ ಅಜ್ಜಾವರ, ತಾಜುದ್ದೀನ್ ಆರಂತೋಡು, ಹಾಗೂ ವಿಖಾಯ ಕಾರ್ಯಕರ್ತರು ಭಾಗವಹಿಸಿದ್ದರು.
ವಿಖಾಯ ಕನ್ವೀನರ್ ತಾಜುದ್ದೀನ್ ಟರ್ಲಿ ಸ್ವಾಗತಿಸಿ, ಚೇರ್ಮನ್ ಜಮಾಲ್ ಬೆಳ್ಳಾರೆ ವಂದಿಸಿದರು,