ಜಗತ್ತಿನ ಕತ್ತಲು ಕಳೆಯಲಿ – ಶ್ರೀರಾಘವೇಶ್ವರ ಶ್ರೀ

July 6, 2020
2:23 PM

ಗೋಕರ್ಣ: ಜಗತ್ತನ್ನು ಮಾರಕ ವ್ಯಾಧಿ ಪೀಡಿಸುತ್ತಿದ್ದು, ಇಡೀ ಜಗತ್ತೇ ಕಂಗಾಲಾಗಿದೆ. ನಿಜಕ್ಕೂ ಜಗತ್ತು ಕತ್ತಲಲ್ಲಿದೆ, ಕಷ್ಟದಲ್ಲಿದೆ, ಬೆಳಕು ಸಿಗುತ್ತಿಲ್ಲ. ಜಗತ್ತಿನ ಅಮಾವಾಸ್ಯೆ ಪೂರ್ಣಿಮೆಯಾಗಿ ಪರಿವರ್ತನೆಯಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.

Advertisement
Advertisement

ಶ್ರೀಕ್ಷೇತ್ರ ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿದ್ಯಾಪೀಠದ ಪರಿಸರದಲ್ಲಿ 27ನೇ ಚಾತುರ್ಮಾಸ್ಯದ ವ್ಯಾಸಪೂಜೆ ನೆರವೇರಿಸಿ ಪೂಜ್ಯರು ಆಶೀರ್ವಚನ ನೀಡಿದರು. ಅಂತರಂಗದಲ್ಲಿ ಜ್ಞಾನದ ಬೆಳಕು ಹಾಗೂ ಚೈತನ್ಯದ ತಂಪನ್ನು ಉಂಟುಮಾಡುವಂತಹದ್ದು ಗುರುಪೂರ್ಣಿಮೆ. ಶಾರ್ವರಿ ಎಂದರೆ ಕತ್ತಲು, ಪೂರ್ಣಿಮೆ ಎಂದರೆ ಬೆಳಕು. ಕತ್ತಲೆಯ ಮಧ್ಯೆ ಬೆಳಗುವಂತಹ ಬೆಳಕು. ಸೂರ್ಯನ ಬೆಳಕಿನ ತಾಪ, ಧಗೆಯನ್ನು ಉಂಟು ಮಾಡುತ್ತದೆ. ಆದರೆ ಪೂರ್ಣಮಿಯ ಬೆಳಕು ತಂಪು ನೀಡುತ್ತದೆ. ಶಾರ್ವರಿ ಗುರುಪೂರ್ಣಿಮೆ ಎಂದರೆ ಗುರು ತಂದ ಬೆಳಕಾಗಿದೆ ಎಂದರು.
ಭಾರತದಲ್ಲಿ ಉಂಟಾದ ಜ್ಞಾನ ಪ್ರಕಾಶ ಪ್ರಪಂಚದಲ್ಲೆಲ್ಲೂ ಆಗಿಲ್ಲ. ಇಂತಹ ದೊಡ್ಡ ಜ್ಞಾನಧನದ ವಾರಸುದಾರರು ನಾವಾಗಿದ್ದು, ಎಲ್ಲವನ್ನೂ ಇವತ್ತು ಕಳೆದುಕೊಂಡಿದ್ದೇವೆ. ದೇಶ ಜ್ಞಾನವನ್ನೆಲ್ಲಾ ಕಳೆದುಕೊಂಡ ಕಾರಣ ಕತ್ತಲು ದೇಶಕ್ಕೆ ಆವರಿಸಿದೆ. ಈ ಕತ್ತಲೆಯನ್ನು ನಿವಾರಿಸಲು ಗುರುಪೂರ್ಣಿಮೆಯೇ ಬೇಕಾಗಿದೆ ಎಂದು ಹೇಳಿದರು.

ಒಂದು ವಿದ್ಯಾ ಪೀಠ ಬೇಕಾಗಿದೆ. ಈ ಚಾತುರ್ಮಾಸ್ಯದ ಉದ್ದೇಶವೇ ವಿದ್ಯೆ. ವಿದ್ಯೆ ಉಳಿಯಬೇಕು, ವಿದ್ಯೆ ಬೆಳೆಯಬೇಕು, ವಿದ್ಯೆ ಬೆಳಗಬೇಕು, ಮತ್ತೊಮ್ಮೆ ವಿದ್ಯೆಯ ಪುನಪ್ರತಿಷ್ಠಾಪನೆ ಆಗಬೇಕಾಗಿದೆ ಎಂಬ ಕಾರಣಕ್ಕೆ ಒಂದು ವಿಶ್ವ ವಿದ್ಯಾ ಪೀಠ, ಐದು ಗುರುಕುಲಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಈಮೂಲಕ ದೇಶದ ಕತ್ತಲನ್ನು ದೂರ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದರು.
ವ್ಯಾಧಿ ತಂದ ಕಷ್ಟ, ವ್ಯಾಧಿ ತಂದ ನಷ್ಟ, ಯುದ್ಧ ಭೀತಿ ಈ ಮುಬ್ಬಗೆಯ ಕಷ್ಟದಲ್ಲಿ ಕತ್ತಲೆಯಲ್ಲಿ ದೇಶ ಇರುವ ಹೊತ್ತು. ದೇಶಕ್ಕೆ ಬಂದ ಕತ್ತಲೆ ನಿವಾರಣೆಯಾಗಲಿ, ದೇಶ ಬೆಳಕಾಗಲಿ, ದೇಶಕ್ಕೆ ಒಳಿತಾಗಲಿ ಎಂದು ಶಂಕರಾಚಾರ್ಯ ಪರಂಪರೆಯ ಪೀಠ ಹಾರೈಸುತ್ತದೆ ಎಂದರು.

ಶನಿವಾರ ಸಾಯಂಕಾಲ ಶ್ರೀಗಳವರ ಪುರಪ್ರವೇಶ ಕಾರ್ಯಕ್ರಮ ನಡೆಯಿತು. ಭಾನುವಾರ ಬೆಳಗ್ಗೆ ಶ್ರೀಕರಾರ್ಚಿತ ಪೂಜೆ, ವ್ಯಾಸಪೂಜೆ, ಭಿಕ್ಷಾ ಸೇವೆ ನಡೆಯಿತು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ | ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ
July 24, 2025
6:19 AM
by: The Rural Mirror ಸುದ್ದಿಜಾಲ
ವಿಷ್ಣುಗುಪ್ತ ವಿವಿಗೆ ಕರ್ಣಾಟಕ ಬ್ಯಾಂಕ್ ಸಂಶೋಧನಾ ಕೇಂದ್ರ ಕೊಡುಗೆ
July 20, 2025
10:25 PM
by: The Rural Mirror ಸುದ್ದಿಜಾಲ
ನಿರಂತರತೆಗೆ ಇರುವ ಶಕ್ತಿ ಅಪಾರ: ರಾಘವೇಶ್ವರ ಶ್ರೀ
July 18, 2025
10:31 PM
by: The Rural Mirror ಸುದ್ದಿಜಾಲ
ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ – ರಾಘವೇಶ್ವರ ಶ್ರೀ
July 13, 2025
9:37 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group