ಸುಳ್ಯ: ಸಿಟಿ ಫ್ರೆಂಡ್ಸ್ ಸ್ಪೋರ್ಟ್ಸ್ ಆಂಡ್ ಆರ್ಟ್ಸ್ ಕ್ಲಬ್ ಜಟ್ಟಿಪಳ್ಳ, ಇದರ 2019-20ನೇ ಸಾಲಿನ ಕಾರ್ಯಕಾರಿ ಸಮೀತಿ ಪದಾಧಿಕಾರಿಗಳ ಪದ ಪ್ರಾಧಾನ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು. ಇಬ್ಬನಿ ಸುಳ್ಯ, ಕಾರ್ಗಿಲ್ ಬಾಯ್ಸ್ , ಗ್ರೀನ್ ಬಾಯ್ಸ್, ಜಟ್ಟಿಪಳ್ಳ ಫ್ರೆಂಡ್ಸ್ , ಕಪಿಲ ಯುವಕ ಮಂಡಲ, ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಇವುಗಳ ಸಹ ಯೋಗದಿಂದ ಜಟ್ಟಿಪಳ್ಳದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು.
ಕಾರ್ಯಕ್ರಮವನ್ನು ಪತ್ರಕರ್ತ ಹರೀಶ್ ಬಂಟ್ವಾಳ್ ಉದ್ಘಾಟಿಸಿದರು. ಕರವೇ ನಗಾರಾಧ್ಯಕ್ಷ ರಶೀದ್ ಜಟ್ಟಿಪಳ್ಳ ಅಧ್ಯಕ್ಷತೆ ವಹಿಸಿದ್ಧರು. ಸಿ.ಎಫ್.ಸಿ ಜಟ್ಟಿಪಳ್ಳ ನೂತನ ಅಧ್ಯಕ್ಷ ನಾಸಿರ್ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮುತ್ತಡಿ, ವಿನೋದ್ ಲಸ್ರಾದೋ ಸುಳ್ಯ ನ.ಪಂ ಇಂಜಿನಿಯರ್ ಶಿವಕುಮಾರ್ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯ ನ.ಪಂ ಸದಸ್ಯರಾದ ಸರೋಜಿನಿ ಪೆಲ್ತಡ್ಕ, ವಾಣಿ ಜಟ್ಟಿಪಳ್ಳ, ಸುಳ್ಯ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮೆನೇಜರ್ ನವೀನ್ ಕುಮಾರ್ ಕಜೆ, ಮುಖ್ಯೋಪಾಧ್ಯಾಯಿನಿ ಇಂದಿರಾ, ಜಟ್ಟಿಪಳ್ಳ ಶಾಲೆಯ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಜಟ್ಟಿಪಳ್ಳ, ಗ್ರೀನ್ ಬಾಯ್ಸ್ ಅಧ್ಯಕ್ಷ ಶಿಹಾಬ್ ಷಾ, ಸಿ.ಎಫ್.ಸಿ ನಿಕಟ ಪೂರ್ವ ಅಧ್ಯಕ್ಷ ಸಂದೇಶ್ ಕುಮಾರ್ ಕೆ.ಜೆ, ಕಪಿಲ ಯುವಕ ಮಂಡಲ ಅಧ್ಯಕ್ಷ ನಿಶಾಂತ್ ಜಟ್ಟಿಪಳ್ಳ, ಕಾರ್ಗಿಲ್ ವಂದಿಸಿದರು. ಕ್ಷ ಪ್ರದೀಪ್ ಕಾರ್ಗಿಲ್ ಉಪಸ್ಥಿತರಿದ್ದರು.
ಸಿ.ಎಫ್.ಸಿ ಗೌರವಾಧ್ಯಕ್ಷ ಜಗದೀಶ್ ಕೆ.ಆರ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶರೀಫ್ ಜಟ್ಟಿಪಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇಬ್ಬನಿ ಅಧ್ಯಕ್ಷ ಖಾದರ್ ಜಟ್ಟಿಪಳ್ಳ ಸ್ವಾಗತಿಸಿ ನಿರೂಪಿಸಿದರು, ಸಿಟಿ ಫ್ರೆಂಡ್ಸ್ ಉಪಾಧ್ಯಕ್ಷ ಫವಾಝ್ ಎನ್ ಎ ವಂದಿಸಿದರು.