ಸವಣೂರು : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸವಣೂರು ವಲಯದ ಅಧ್ಯಕ್ಷರಾಗಿ ವಕೀಲ ಮಹೇಶ್ ಕೆ.ಸವಣೂರು ಆಯ್ಕೆಯಾಗಿದ್ದಾರೆ.
ಪುತ್ತೂರು ಯೋಜನಾ ಕಚೇರಿಯಲ್ಲಿ ನಡೆದ ಪುತ್ತೂರು ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಮಹೇಶ್ ಕೆ ಸವಣೂರು ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಮಾಜಿ ಕಾರ್ಯದರ್ಶಿಯಾಗಿ,ಮಾಜಿ ಅಧ್ಯಕ್ಷರಾಗಿ , ಸವಣೂರು ಬೊಳ್ಳಿ ಬೊಳ್ಪು ತುಳುಕೂಟದ ಮಾಜಿ ಅಧ್ಯಕ್ಷರಾಗಿ, ಪುಣ್ಚಪ್ಪಾಡಿ ವಿನಾಯಕನಗರ ಶ್ರೀಗೌರಿ ಗಣೇಶ ಸೇವಾ ಸಂಘದ ಮಾಜಿ ಕಾರ್ಯದರ್ಶಿಯಾಗಿ, ಜನಜಾಗೃತಿ ವೇದಿಕೆಯ ಸವಣೂರು ಗ್ರಾಮ ಸಮಿತಿ ಅಧ್ಯಕ್ಷರಾಗಿ ,ಪುತ್ತೂರು ತಾಲೂಕು ಕುಲಾಲ ಸಮಾಜ ಸೇವಾ ಸಂಘದ ಕಾರ್ಯದರ್ಶಿಯಾಗಿದ್ದಾರೆ.
ಇವರು 13 ವರ್ಷಗಳಿಂದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel