ಜನಪ್ರತಿನಿಧಿಗಳ ಮಾತಿಗೂ ಕ್ಯಾರೇ ಎನ್ನದ ಇಲಾಖೆ : ಚಾರ್ಮಾತ ಬಳಿ ಪರದಾಡುತ್ತಿರುವ ಗ್ರಾಮಸ್ಥರು : ಪ್ರತಿಭಟನೆಗೆ ಸಿದ್ಧತೆ

November 4, 2019
12:52 PM

ನಾಲ್ಕೂರು ಗ್ರಾಮದ ನಡುಗಲ್ಲು ಚಾರ್ಮತ ಸಂಪರ್ಕಿಸುವ ನೆಲ್ಲಿಪುಣಿ ಎಂಬಲ್ಲಿ ಕಾಲುಸಂಕ ನಿರ್ಮಾಣಕ್ಕೆ ರಸ್ತೆಯಲ್ಲಿ ತಳಪಾಯ ತೆಗೆದು ವಿಳಂಬ ಕಾಮಗಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶಾಲಾಮಕ್ಕಳು  ವೃದ್ಧರು ಸೇರಿದಂತೆ ಗ್ರಾಮಸ್ಥರು ಹೋಗಲು ರಸ್ತೆ ಹಾಗೂ ದಾರಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗುತ್ತಿಗಾರು: ನಾಲ್ಕೂರು ಗ್ರಾಮದ ನಡುಗಲ್ಲು – ಚಾರ್ಮತ ಸಂಪರ್ಕಿಸುವ ನೆಲ್ಲಿಪುಣಿ ಎಂಬಲ್ಲಿ ಕಾಲುಸಂಕ ನಿರ್ಮಾಣಕ್ಕೆ ಸುಮಾರು 15 ಲಕ್ಷ ರೂಪಾಯಿ ಅನುದಾನವನ್ನು ಶಾಸಕ ಎಸ್ ಅಂಗಾರ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ ಕಾಮಗಾರಿ ಆರಂಭವಾಗಿತ್ತು. ಆದರೆ ಇದೀಗ ವಿಳಂಬವಾಗುತ್ತಿರುವ ಕಾರಣ ಗ್ರಾಮಸ್ಥರು ಪರದಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಈ ಕಾಮಗಾರಿಯು ಪಿಡಬ್ಲ್ಯೂಡಿ  ಇಲಾಖೆಗೆ ಸಂಬಂಧಪಟ್ಟಿದ್ದು, ಟೆಂಡರು ಕೂಡಾ ಆಗಿ ಕೆಲಸ ಪ್ರಾರಂಭಿಸಲಾಗಿತ್ತು.  ರಸ್ತೆಯಿಂದ ಆ ಕಡೆಗೆ ಪರಿಶಿಷ್ಟ ಪಂಗಡ ಮತ್ತು ಇತರರು ಸೇರಿ 12 ಕ್ಕಿಂತಲೂ ಅಧಿಕ ಮನೆ ಇದ್ದು, ರಸ್ತೆಯಲ್ಲಿಯೇ ತಳಪಾಯವನ್ನು ಮಾಡಿ ಹೋದ ಗುತ್ತಿಗೆದಾರರು ಮತ್ತು ಪಿಡಬ್ಲ್ಯೂಡಿ ಇಲಾಖೆ ಈ ಭಾಗಕ್ಕೆ ಇನ್ನೂ ಬಾರದೇ ವಿಳಂಬ ಧೋರಣೆ ತಳೆದಿದೆ.

ರಸ್ತೆಯಲ್ಲಿಯೇ ತಳಪಾಯ ಮಾಡಿದ ಕಾರಣ ಆ ಭಾಗದ ಮನೆಯವರಿಗೆ, ಶಾಲಾಮಕ್ಕಳು ಮತ್ತು ವೃದ್ಧರಿಗೆ ಹೋಗಲು ರಸ್ತೆ ಹಾಗೂ ದಾರಿ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಪಿಡಬ್ಲ್ಯೂಡಿ  ಇಲಾಖೆಗೆ ಮತ್ತು ಗುತ್ತಿಗೆದಾರರಿಗೆ ಆ ಭಾಗದ ಜನಪ್ರತಿನಿಧಿಗಳು ಸಾಕಷ್ಟು ಬಾರಿ ದೂರವಾಣಿ ಕರೆಯ ಮೂಲಕ ತಿಳಿಸಿದ್ದರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ದೂರು ಕೇಳಿಬಂದಿದೆ. ಹೀಗಾಗಿ ತಕ್ಷಣವೇ ಕೆಲಸವನ್ನು ಪ್ರಾರಂಭಿಸದಿದ್ದಲ್ಲಿ ಪಿಡಬ್ಲ್ಯೂಡಿ  ಇಲಾಖೆಯ ಮುಂದೆ ಧರಣಿ ನಡೆಸಲು ಸಾರ್ವಜನಿಕರು ನಿರ್ಧರಿಸಿದ್ದಾರೆ.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅತಿವೃಷ್ಟಿ, ಬರ, ಹೀಟ್‌ ವೇವ್‌ಗಳಿಗೆ ಯಾರು ಕಾರಣ? ಐಐಟಿ ದೆಹಲಿ ಅಧ್ಯಯನದಿಂದ ಕುತೂಹಲಕಾರಿ ಮಾಹಿತಿ!
June 18, 2026
10:15 AM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡಕ್ಕೆ ಕೈಗಾರಿಕಾ ಬಲ : ಗಂಜಿಮಠ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ ಸಂಸದ ಬ್ರಿಜೇಶ್ ಚೌಟ
June 17, 2026
8:43 PM
by: ದ ರೂರಲ್ ಮಿರರ್.ಕಾಂ
Gen Z ಮತದಾರರತ್ತ ಬಿಜೆಪಿ ಕಣ್ಣು- 18-25 ವಯೋಮಾನದ ಯುವಕರಿಗಾಗಿ ‘ತರುಣ ಮೋರ್ಚಾ’ ರಚನೆಗೆ ಚಿಂತನೆ
June 17, 2026
8:21 PM
by: ದ ರೂರಲ್ ಮಿರರ್.ಕಾಂ
ವಿಯೆಟ್ನಾಂನಲ್ಲಿ ಅಡಿಕೆ ಬೆಲೆ ಕುಸಿತ – ಚೀನಾದ ಬೇಡಿಕೆ ಇಳಿಕೆಯಿಂದ ರೈತರಿಗೆ ಸಂಕಷ್ಟ! – ಭಾರತದ ಅಡಿಕೆ ಮಾರುಕಟ್ಟೆಗೆ ಏನು ಎಚ್ಚರಿಕೆ..?
June 17, 2026
7:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror