ಜನವರಿ 19 ರಂದು ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನ: ಎಲಿಮಲೆ ಆತಿಥ್ಯ

December 15, 2019
7:32 PM

ಸುಳ್ಯ: ಸುಳ್ಯ ತಾಲೂಕು 24 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲಿಮಲೆ ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಆತಿಥ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

Advertisement
Advertisement
Advertisement

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಹಿರಿಯ ವಿದ್ಯಾರ್ಥಿ ಸಂಘ ಮತ್ತು ಊರ ಪ್ರಮುಖರ ಉಪಸ್ಥಿತಿಯಲ್ಲಿ ಎಲಿಮಲೆ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಸಮಾಲೋಚನೆ ನಡೆದು ಜನವರಿ 19 ರಂದು ಸಾಹಿತ್ಯ ಸಮ್ಮೇಳನ ನಡೆಸುವುದೆಂದು ನಿರ್ಧರಿಸಲಾಯಿತು. ಸಾಮಾಜಿಕ ಧುರೀಣ, ಜ್ಞಾನದೀಪ ವಿದ್ಯಾ ಸಂಸ್ಥೆಗಳ ಸಂಚಾಲಕ ಎ.ವಿ.ತೀರ್ಥರಾಮ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಕನ್ನಡ ಸಾಹಿತ್ಯಕ್ಕೆ ಪರಿಷತ್ ಅಧ್ಯಕ್ಷ ಡಾ.ಹರಪ್ರಸಾದ್ ತುದಿಯಡ್ಕ, ಗೌರವ ಕಾರ್ಯದರ್ಶಿ ಹಾಗೂ ಎಲಿಮಲೆ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಚಂದ್ರಶೇಖರ ಪೇರಾಲು, ಹಿರಿಯ ಸಾಹಿತಿ ಜಿ.ಎಸ್.ಉಬರಡ್ಕ, ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಉಪಸ್ಥಿತರಿದ್ದರು.

Advertisement

ಗ್ರಾಮ ಪಂಚಾಯತ್ ಸದಸ್ಯ ಶೈಲೇಶ್ ಅಂಬೆಕಲ್ಲು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಗುಡ್ಡೆಮನೆ, ಶಿಕ್ಷಕ ಗೋಪಿನಾಥ ಮೆತ್ತಡ್ಕ, ಪ್ರೌಢ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ವಿಶ್ವನಾಥ ನಂದಗೋಕುಲ, ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷ ರಮಾನಂದ ಹೆಚ್.ಡಿ. , ಲಿಂಗಪ್ಪ ಮಾಸ್ತರ್ ಹರ್ಲಡ್ಕ, ಗದಾಧರ ಬಾಳುಗೋಡು, ಪುರುಷೋತ್ತಮ ಕಜೆ, ಓಂ ಪ್ರಕಾಶ್ ಕಜೆ, ಹರಿಪ್ರಸಾದ್ ಕಜೆ, ಜಯಂತ ತಳೂರು, ದಯಾನಂದ ಮೆತ್ತಡ್ಕ, ಹರೀಶ್ ಚಳ್ಳ, ದಿನೇಶ್ ಕೇರ, ಕೇಶವ ಕಜೆ, ರಂಜಿತ್ ಚಿತ್ತಡ್ಕ, ದೀಕ್ಷಿತ್ ಚಿತ್ತಡ್ಕ, ಜೀವನ್ ಕುಮಾರ್ ಟಿ,  ಶೃಜೇಶ್, ಹರಿಪ್ರಸಾದ್ ಬಿ.ವಿ., ಕಿಶನ್ ಎಂ. ಆಸ್ಮಾ, ತಾರನಾಥ ಅಡಿಗೈ, ಭೋಜಪ್ಪ  ಹರ್ಲಡ್ಕ, ಲೋಹಿತ್ ಮಾವಿನಗೊಡ್ಲು,  ಪಿ.ಭರತ್, ಶರತ್ ಮರ್ಗಿಲಡ್ಕ, ರಂಜಿತ್ ಎ.ವೈ. ಮೊದಲಾದವರು ಸಭೆಯಲ್ಲಿದ್ದರು.

ಸಮ್ಮೇಳನದ ರೂಪು ರೇಷೆಯ ಕುರಿತು ಡಾ.ಹರಪ್ರಸಾದ್ ತುದಿಯಡ್ಕ ಮಾಹಿತಿ ನೀಡಿದರು. ಸಮ್ಮೇಳನದ ಆತಿಥ್ಯ ವಹಿಸಲು ನಮಗೆ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ. ಎಲ್ಲರ ಸಹಕಾರದೊಂದಿಗೆ ಈ ಸಾಹಿತ್ಯ ಹಬ್ಬವನ್ನು ಯಶಸ್ವಿಗೊಳಿಸೋಣ ಎಂದು ಎ.ವಿ.ತೀರ್ಥರಾಮ ಹೇಳಿದರು. ಎಲಿಮಲೆಯ ಸಂಘಟನಾ ಶಕ್ತಿಯ ಮೂಲಕ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಮಾಡೋಣ ಎಂದು ಶೈಲೇಶ್ ಅಂಬೆಕಲ್ಲು ಹೇಳಿದರು.

Advertisement

ಚಂದ್ರಶೇಖರ ಪೇರಾಲು ಸ್ವಾಗತಿಸಿ ಪ್ರಸ್ತಾವನೆಗೈದರು. ಗೋಪಿನಾಥ ಮೆತ್ತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ
ಅಕ್ಕ-2024ರ ಸಮ್ಮೇಳನಕ್ಕೆ ಅದ್ಧೂರಿ ಸಿದ್ದತೆ | 3 ದಿನಗಳ ಕಾಲ ಅಮೇರಿಕಾದ ರಿಚ್ಮಂಡ್ ನಗರದಲ್ಲಿ ಕನ್ನಡ ಡಿಂಡಿಮ
August 27, 2024
3:29 PM
by: The Rural Mirror ಸುದ್ದಿಜಾಲ
ಬದನಾಜೆ ಶಂಕರ್ ಭಟ್ | ಅಡಿಕೆ ಮೌಲ್ಯವರ್ಧನೆಯ ನೆಲ ವಿಜ್ಞಾನಿ | ಆ.18 ಕ್ಕೆ ನರೇಂದ್ರ ರೈ ದೇರ್ಲ ಅವರ ಪುಸ್ತಕ ಬಿಡುಗಡೆ |
August 14, 2024
3:40 PM
by: The Rural Mirror ಸುದ್ದಿಜಾಲ
ವಿಜೃಂಭಣೆಯಿಂದ ನಡೆಯಲಿದೆ ಈ ಬಾರಿಯ ದಸರಾ ನಾಡಹಬ್ಬ ಆಚರಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ
August 13, 2024
10:26 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror