ದುಗಲಡ್ಕ: ಸುಳ್ಯ ತಾಲೂಕಿನ ದುಗಲಡ್ಕ ಬಳಿಯ ಗೋಂಟಡ್ಕ ಎಂಬಲ್ಲಿ ಜೀಪು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ನಡೆದಿದೆ.
ಮರ್ಕಂಜದಿಂದ ಸುಳ್ಯದ ಕಡೆಗೆ ಹೋಗುತ್ತಿದ್ದ ಜೀಪು ಹಾಗೂ ದುಗಲಡ್ಕ ಕಡೆಗೆ ಗೋಗುವ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬೊಳುಬೈಲಿನ ರಾಜಕುಮಾರ ಜೀಪಿನ ಅಡಿಗೆ ಸಿಲುಕಿ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಯುವಕ ಮೆಸ್ಕಾಂ ಮೀಟರ್ ರೀಡರ್ ಆಗಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel