ಜು.19: ರಾಘವೇಶ್ವರ ಶ್ರೀಗಳ ವರ್ಧಂತ್ಯುತ್ಸವ

July 18, 2019
10:49 PM

ಬೆಂಗಳೂರು: ಶ್ರೀರಾಮಚಂದ್ರಾಪುರ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿಯವರ ವರ್ಧಂತ್ಯುತ್ಸವ ಜು.19 ರಂದು  ಗಿರಿನಗರದ ಶ್ರೀ ರಾಮಾಶ್ರಮದಲ್ಲಿ ನಡೆಯಲಿದೆ.
ಶ್ರೀಮಠದ ಶಿಷ್ಯಭಕ್ತರು ಶ್ರೀಸಂಸ್ಥಾನಕ್ಕೆ ಸಮರ್ಪಿಸಿರುವ ನೂತನ ರಜತಪೀಠಾರೋಹಣ ಇದೇ ಸಂದರ್ಭದಲ್ಲಿ ನಡೆಯಲಿದೆ. ಶ್ರೀಗಳು ಶ್ರೀರಾಮಾಶ್ರಮದಲ್ಲಿ ರಾಮಾಯಣ ಚಾತುರ್ಮಾಸ್ಯ ಕೈಗೊಂಡಿದ್ದು, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಕಲ್ಪ ಸಾಧನೆಗಾಗಿ ಪ್ರತಿದಿನ ಧಾರಾ ರಾಮಾಯಣ ಪ್ರವಚನ ನಡೆಯುತ್ತಿದೆ.
ವರ್ಧಂತ್ಯುತ್ಸವ ಅಂಗವಾಗಿ ಬೆಳಿಗ್ಗೆ ಅರುಣ ಹೋಮ, 48 ಅರುಣ ನಮಸ್ಕಾರ, ಮಾತೆಯರಿಂದ ಮಂಗಳಾರತಿ, 108 ಕುಂಭಗಳ ಗಂಗಾಭಿಷೇಕ, ಶ್ರೀರಾಮದೇವರಿಗೆ ಅಷ್ಟಾವಧಾನ ಸೇವೆ, ಮಧ್ಯಾಹ್ನ ಶ್ರೀಗಳಿಗೆ ತುಲಾಭಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಧರ್ಮ ಕರ್ಮ ವಿಭಾಗದ ಶ್ರೀಸಂಯೋಜಕ ಕೂಟೇಲು ರಾಮಕೃಷ್ಣ ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನವರಾತ್ರಿ – ದಸರಾ | ಶಕ್ತಿ ತತ್ತ್ವದ ವಿಜ್ಞಾನ ಮತ್ತು ಸಂಸ್ಕೃತಿ
September 22, 2025
7:35 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಇಂದಿನಿಂದ ‘ನವರಾತ್ರ ನಮಸ್ಯಾ’ | ವೈಭವದೊಂದಿಗೆ ಸಂಪನ್ನವಾದ ರಾಘವೇಶ್ವರ ಶ್ರೀಗಳ ಪುರಪುವೇಶ ಮೆರವಣಿಗೆ
September 22, 2025
7:26 AM
by: The Rural Mirror ಸುದ್ದಿಜಾಲ
ಮಹಾಲಯ ಅಮಾವಾಸ್ಯೆ | ಪರಂಪರೆ, ತತ್ತ್ವ ಮತ್ತು ಆಧುನಿಕ ಜೀವನದ ಸೇತುವೆ
September 21, 2025
8:12 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಸೆ.22 ರಿಂದ ಸಾಗರದಲ್ಲಿ ಸಂಭ್ರಮದ ‘ನವರಾತ್ರ ನಮಸ್ಯ’ | ರಾಘವೇಶ್ವರ ಶ್ರೀಗಳ ಅದ್ದೂರಿ ಪುರಪ್ರವೇಶ
September 19, 2025
9:47 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group