ಪುತ್ತೂರು: ಪುತ್ತೂರಿನಲ್ಲಿ ರಾಜ್ಯ ಮಟ್ಟದ ಹಲಸಿನ ಹಬ್ಬ ಜೂ.14 ಹಾಗೂ 15 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಈ ಸಂಬಂಧ ಪೂರ್ವಬಾವಿ ಸಭೆ ಹಾಗೂ ಹಲಸು ಹಬ್ಬ ಕ್ರಿಯಾ ಸಮಿತಿ ರಚನೆ ಮಾಡಲಾಯಿತು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಪೂರ್ವಬಾವಿ ಸಭೆ ನಡೆಯಿತು. ಈ ಸಭೆಯಲ್ಲಿ ಹಲಸು ಹಬ್ಬವನ್ನು ವೈಶಿಷ್ಠ್ಯ ಪೂರ್ಣವಾಗಿ ಆಚರಿಸುವಂತೆ ನಿರ್ಧರಿಸಲಾಯಿತು. ಹಲಸಿನ ವಿವಿಧ ಖಾದ್ಯಗಳು , ಹಲಸು ಖಾದ್ಯಗಳ ಪ್ರಾತ್ಯಕ್ಷಿಕೆ, ಹಲಸು ಬಗ್ಗೆ ಗೋಷ್ಠಿಗಳು ಸೇರಿದಂತೆ ಹಲಸು ಬಗ್ಗೆಯೇ ಎರಡು ದಿನ ಚರ್ಚೆ ನಡೆಸಲು ನಿರ್ಧರಿಸಲಾಯಿತು.
ಇದೇ ಸಂದರ್ಭ ಹಲಸು ಕ್ರಿಯಾ ಸಮಿತಿ ರಚನೆ ಮಾಡಲಾಯಿತು. ಹಲಸು ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಸೇಡಿಯಾಪು ಜನಾರ್ಧನ ಭಟ್ ಅವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸುಹಾಸ ಮರಿಕೆ, ಉಪಾಧ್ಯಕ್ಷರಾಗಿ ಗಣಪತಿ ಭಟ್ ಎಕ್ಕಡ್ಕ, ಸಂಚಾಲಕರಾಗಿ ಸತೀಶ್ ಕೊಂಗೋಟು, ಗೌರವ ಸಲಹೆಗಾರರಾಗಿ ವಿ.ಬಿ ಅರ್ತಿಕಜೆ, ಎವಿ ನಾರಾಯಣ ಮೊದಲಾದವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭ ವಿವಿಧ ಸಮಿತಿ ರಚನೆ ಮಾಡಲಾಯಿತು.
ಸಭೆಯಲ್ಲಿ ಹಲಸು ಸ್ನೇಹ ಸಂಗಮ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ, ಪಾಂಡುರಂಗ ಭಟ್, ತಿಮ್ಮಪ್ಪ ಪಾಟಾಳಿ, ಮಹಾದೇವ ಶಾಸ್ತ್ರಿ ಮಣಿಲ, ಮಹೇಶ್ ಪುಚ್ಚಪ್ಪಾಡಿ, ಗೋವಿಂದ ಬೋರ್ಕರ್, ಕವಿತಾ ಅಡೂರು, ಟಿ ರಂಗರಾವ್, ಜಗನ್ನಿವಾಸ ರಾವ್, ಹರಿಕೃಷ್ಣ ಕಾಮತ್, ಎಪಿ ಸದಾಶಿವ, ಯಮುನಾ , ಶ್ರೀಶಕುಮಾರ್ , ಐಕೆ ಬೊಳುವಾರು, ವೇಣುಗೋಪಾಲ್, ಶಶಿರಾಜ್ ರೈ, ಭಾಸ್ಕರ ಬಾರ್ಯ , ವತ್ಸಲಾ ರಾಜ್ಞಿ ಮೊದಲಾದವರು ಉಪಸ್ಥಿತರಿದ್ದರು.
ಹಲಸು ಸ್ನೇಹ ಸಂಗಮ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರಕಾಶ್ ಕೊಡೆಂಕಿರಿ ವಂದಿಸಿದರು. ಸುಹಾಸ್ ಮರಿಕೆ ಕಾರ್ಯಕ್ರಮ ನಿರೂಪಿಸಿದರು.