ಟ್ವೆಂಟಿ-20: ವಿಂಡೀಸ್‌ಗೆ 8 ವಿಕೆಟ್‌ಗಳ ಭರ್ಜರಿ ಗೆಲುವು

December 9, 2019
9:16 AM

ತಿರುವನಂತಪುರ: ಆತಿಥೇಯ ಭಾರತ ವಿರುದ್ಧ ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ರವಿವಾರ ಇಲ್ಲಿ ನಡೆದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದೆ.

Advertisement
Advertisement

ಗೆಲುವಿಗೆ 171 ರನ್‌ಗಳ ಸವಾಲನ್ನು ಪಡೆದ ವಿಂಡೀಸ್ ತಂಡ 18.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ವಿಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ವೆಸ್ಟ್‌ಇಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಲೆಂಡ್ಲ್ ಸಿಮೊನ್ಸ್ ಔಟಾಗದೆ 67 ರನ್(45ಎ, 4ಬೌ,4ಸಿ), ಎವಿನ್ ಲೆವಿಸ್ 40 ರನ್(35ಎ, 3ಬೌ,3ಸಿ), ಶಿಮ್ರ್‌ನ್ ಹೆಟ್ಮಯೆರ್ 23 ರನ್ ಮತ್ತು ನಿಕೊಲಾಸ್ ಪೂರನ್ ಔಟಾಗದೆ 38 ರನ್(18ಎ, 4ಬೌ, 2ಸಿ) ತಂಡದ ಗೆಲುವಿಗೆ ನೆರವಾದರು.

ಭಾರತದ ಬೌಲರ್‌ಗಳ ದುರ್ಬಲ ದಾಳಿ ಮತ್ತು ಕಳಪೆ ಫೀಲ್ಡಿಂಗ್ ನ ಪ್ರಯೋಜನೆ ಪಡೆದ ವಿಂಡೀಸ್‌ನ ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಗೆಲುವಿನ ದಡ ಸೇರಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿತ್ತು. ಭಾರತದ ಪರ ಶಿವಂ ದುಬೆ 30 ಎಸೆತದಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿ ಸಹೀತ 54 ರನ್ ಗಳಿಸಿದರು‌. ಋಷಬ್ ಪಂತ್ 22 ಎಸೆತಗಳಲ್ಲಿ 33ರನ್ ಕಲೆ ಹಾಕಿದರು.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರೀತಿಯನ್ನು ಶಾಶ್ವತವಾಗಿಡಲು ಈ 7 ಟಿಪ್ಸ್ ತಿಳಿಯಿರಿ..!
July 25, 2025
7:17 AM
by: ದ ರೂರಲ್ ಮಿರರ್.ಕಾಂ
ಅರಣ್ಯವಾಸಿಗಳು, ಬುಡಕಟ್ಟು ಜನಾಂಗದವರಿಗೆ ಕಾಡಿನಲ್ಲಿ ಜಾನುವಾರು ಮೇಯಿಸಲು ಅವಕಾಶ
July 24, 2025
11:13 PM
by: The Rural Mirror ಸುದ್ದಿಜಾಲ
ದ.ಕ. ಜಿಲ್ಲೆಯಲ್ಲಿ ಕೆಂಪುಕಲ್ಲು, ಮರಳಿನ ಅಭಾವ | ಸಂಕಷ್ಟ ಎದುರಿಸುತ್ತಿರುವ ಜನಸಾಮಾನ್ಯರು | ರಾಜ್ಯ ಸರ್ಕಾರ ಕೂಡಲೇ ಅಗತ್ಯ ಕ್ರಮಕೈಗೊಳ್ಳಲು ಸಂಸದ ಬ್ರಿಜೇಶ್‌ ಚೌಟ ಒತ್ತಾಯ |
July 24, 2025
10:40 PM
by: The Rural Mirror ಸುದ್ದಿಜಾಲ
ಅಡಿಕೆಗೆ ಕೊಳೆರೋಗ ಇದೆಯೇ…? | ಮಾಹಿತಿ ದಾಖಲಿಸಬಹುದೇ…?
July 24, 2025
5:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group