ಸುಳ್ಯ:ರಾಜ್ಯ ಸರಕಾರ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿತವಾಗಿದ್ದು , ಸುಳ್ಯದವರಾದ ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಡಾ.ಕೊಳಂಬೆ ಚಿದಾನಂದ ಗೌಡ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಖ್ಯಾತ ಕನ್ನಡ ಕವಿ ಚೊಕ್ಕಾಡಿಯ ದಿ.ಕೊಳಂಬೆ ಪುಟ್ಟಣ್ಣ ಗೌಡರ ಪುತ್ರರಾಗಿರುವ ಡಾ.ಕೆ.ಚಿದಾನಂದ ಗೌಡರು ಹಲವಾರು ವರ್ಷಗಳ ಕಾಲ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಬಳಿಕ ಕುಲಪತಿಯಾಗಿ ನಿವೃತ್ತರಾದವರು. ಸಾಹಿತಿಯೂ ಆಗಿರುವ ಇವರ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ರಾಷ್ಟ್ರಕವಿ ಕುವೆಂಪು ರವರ ಪುತ್ರಿ ತಾರಿಣಿಯವರನ್ನು ವಿವಾಹವಾಗಿರುವ ಡಾ.ಕೆ.ಚಿದಾನಂದ ಗೌಡರು ಮೈಸೂರಿನಲ್ಲಿ ನೆಲೆಸಿದ್ದಾರೆ. ಶಿಕ್ಷಣ ತಜ್ಞರಾಗಿರುವ ಇವರು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel