ಡಾ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ತಾಲೂಕು ಭಜನಾ ಪರಿಷತ್ ಪದಾಧಿಕಾರಿಗಳ ಸಭೆ

September 19, 2019
12:57 PM

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ ತಾಲೂಕುವಾರು ಪದಾಧಿಕಾರಿಗಳ ಸಭೆಯು ಧರ್ಮಸ್ಥಳ ಕ್ಷೇತ್ರದ ವಸಂತ ಮಹಲಿನಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೇಮಾವತಿ ಹೆಗ್ಗಡೆ, ಮಾಣಿಲ ಕ್ಷೇತ್ರದ ಮೋಹನದಾಸ ಈಶ ವಿಠಲ ಸ್ವಾಮೀಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಭಜನಾ ಪರಿಷತ್ ನ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ ವಹಿಸಿದ್ದರು.

Advertisement
Advertisement

‘ಪರಿಷತ್ ನ ಮೂಲಕ ಗ್ರಾಮದ, ಪ್ರಾದೇಶಿಕ ಸುಭಿಕ್ಷೆಯಾಗಬೇಕು.  ಜಾತಿ, ಮತ ಭೇದವೆಂಬ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಭಜನಾ ಮಂದಿರಗಳು ಸ್ಥಾಪಿತವಾಗಿದೆ. ಭಜನಾ ಮಂದಿರದ ಆರೋಗ್ಯ ರಕ್ಷಣೆಯನ್ನು ಪರಿಷತ್ ಕಾಪಾಡುವಂತಾಗಬೇಕು. ಪರಿವರ್ತನೆ ಮತ್ತು ಧಾರ್ಮಿಕ ಮೌಲ್ಯದ ಉಳಿವಿಗಾಗಿ ಪ್ರೇರಣೆ ನೀಡಬೇಕು. ಆಧುನೀಕರಣದ ಸ್ವರೂಪವನ್ನು ಭಜನೆಗೆ ನೀಡಿ ಹೊಸತನದ ಭಜನೆಯಿಂದ ಯುವ ಪೀಳಿಗೆಯನ್ನು ಭಜನೆಯೆಡೆಗೆ ಆಕರ್ಷಿಸುವಂತೆ ಮಾಡಬೇಕು. ಯುವ ಪೀಳಿಗೆಯಲ್ಲಿ ಭಕ್ತಿ ಮಾರ್ಗ ಬೆಳೆಯಬೇಕು ಎಂದು ಡಾ.ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ನೀಡಿದರು.

‘ಭಜನೆಯ ಅಗಾಧವಾದ ಶಕ್ತಿಯಿಂದ ಸ್ವಸ್ಥ ಸಮಾಜ ನಿರ್ಮಾಣವಾಗುವುದು. ಭಜಕರಲ್ಲಿ ಶಿಸ್ತು, ಸಂಯಮ, ಸೌಜನ್ಯದ ಗುಣಗಳಿರಬೇಕು. ಮನ ಹಾಗೂ ಮನೆ ಪರಿವರ್ತನೆಯಾಗಲು ಭಜನೆ ಪೂರಕ ಎಂದು ಮೋಹನದಾಸ ಸ್ವಾಮೀಜಿ ತಿಳಿಸಿದರು.
‘ಸ್ವಯಂ ಇಚ್ಚೆಯಿಂದ ಭಜನೆಯಲ್ಲಿ ಪಾಲ್ಗೊಳ್ಳಬೇಕು. ಪರಿಷತ್ ನ ಮೂಲಕ ಸಾಮಾಜಿಕವಾದ ಸೇವೆಯು ಸಮಾಜಕ್ಕೆ ಅರ್ಪಣೆಯಾಗಲಿ. ದುಶ್ಚಟ ಮುಕ್ತ ಸಮಾಜ ನಿರ್ಮಾಣವಾಬೇಕು. ಭಜನೆಯಿಂದ ಬದಲಾವಣೆ ಆಗಲಿ ಎಂದು ಹೇಮಾವತಿ ಹೆಗ್ಗಡೆಯವರು ಸಂದೇಶ ನೀಡಿದರು.

ತಾಲೂಕುವಾರು ಪರಿಷತ್ ನ ಅಧ್ಯಕ್ಷರು ವರದಿಯನ್ನು ಮತ್ತು ಮುಂದಿನ ಯೋಜನೆಗಳ ವಿವರವನ್ನು ತಿಳಿಸಿದರು.
ಪರಿಷತ್ ನ ಕಾರ್ಯದರ್ಶಿ ಜಯರಾಮ ನೆಲ್ಲಿತ್ತಾಯ, ಭಜನಾ ತರಬೇತುದಾರ ರಾಮಕೃಷ್ಣ ಕಾಟುಕುಕ್ಕೆ ಮತ್ತು ಪರಿಷತ್ ನ ಪದಾಧಿಕಾರಿಗಳು, ಯೋಜನಾಧಿಕಾರಿಗಳು, ಹಾಗೂ ರಾಜ್ಯದ ಬೇರೆ ಬೇರೆ ತಾಲೂಕಿನ ಪರಿಷತ್ ನ ಅಧ್ಯಕ್ಷರು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಲಾಮೆಗಳ ಸಂತಾನೋತ್ಪತ್ತಿಗೆ ಅರಣ್ಯ ಇಲಾಖೆ ರಕ್ಷಣೆ | ಬಾವಳ ಕಡಲತೀರದಲ್ಲಿ ಸಂತೋಷದ ಕ್ಷಣ
February 14, 2026
7:55 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ಸಮುದ್ರ ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆಗೆ ಸಂಸದರಿಂದ ಒತ್ತಾಯ
February 14, 2026
7:45 AM
by: ದ ರೂರಲ್ ಮಿರರ್.ಕಾಂ
ಕರಾವಳಿ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಆಗ್ರಹ | ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಸಮಗ್ರ ದೃಷ್ಟಿ ಅಗತ್ಯ
February 13, 2026
10:24 AM
by: ದ ರೂರಲ್ ಮಿರರ್.ಕಾಂ
ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror