ಡಿ.24 ರಿಂದ 26 ಕೆ.ವಿ.ಜಿ ಸುಳ್ಯ ಹಬ್ಬ ಆಚರಣೆ

December 21, 2019
2:24 PM

ಸುಳ್ಯ: ಸುಳ್ಯದ ಅಮರಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ 91ನೇ ಜನ್ಮ ದಿನಾಚರಣೆಯ ಅಂಗವಾಗಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ವತಿಯಿಂದ ಡಿ.24ರಿಂದ 26ರವರೆಗೆ ಕೆವಿಜಿ ಸುಳ್ಯ ಹಬ್ಬ ನಡೆಯಲಿದೆ ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.

Advertisement
Advertisement
Advertisement
Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.24ರಂದು ಸಂಜೆ 7.00ರಿಂದ ಸುಳ್ಯ ತಾಲೂಕು ಲಗೋರಿ ಅಸೋಸಿಯೇಶನ್ ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಆಹ್ವಾನಿತ ಲೀಗ್ ಮಾದರಿಯ ಲಗೋರಿ ಪಂದ್ಯಾಟ, ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಹಾಕಿರುವ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಡಿ.25 ರಂದು ಪೂರ್ವಾಹ್ನ ಗಂಟೆ 9.30ಕ್ಕೆ ತಾಲೂಕು ಮಟ್ಟದ ಕ್ರೀಡಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ. ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೊಸಿಯೇಶನ್ ವತಿಯಿಂದ ಸುಳ್ಯ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿದೆ. ಸಂಜೆ 7ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು ಪುತ್ತೂರು ಶಾಸಕ ಸಂಜೀವ ಮಠಂದೂರು ಸಾಧಕರನ್ನು ಸನ್ಮಾನಿಸುವರು.

Advertisement

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಕರ್ನಾಟಕ ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮುಖ್ಯ ಅತಿಥಿಗಳಾಗಿರುತ್ತಾರೆ. ಸಂಘದ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರಾದ ಪದ್ಮಾರಂಗನಾಥ, ಡಾ.ಮಾಧವ ಪೆರಾಜೆ, ಡಾ.ರಂಗನಾಥ್, ಕೆ.ರಾಮಚಂದ್ರ ಭಟ್, ಸಿಂಚನಾ ಡಿ. ಗೌಡ ಅವರನ್ನು ಸನ್ಮಾನಿಸಲಾಗುವುದು. ಡಾ.ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನವಾದ ಡಿ.26 ರಂದು ಸಂಜೆ 7.00 ಗಂಟೆಗೆ ಕೆ.ವಿ.ಜಿ. ಸಂಸ್ಮರಣೆ ಮತ್ತು ಕೆ.ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸುವರು. ವಿಲಿಯಂ ಲಸ್ರಾದೋ ಹಾಗೂ ರಾಘವ ಗೌಡ ಪಲ್ಲತ್ತಡ್ಕ ಅವರಿಗೆ ಕೆ.ವಿ.ಜಿ. ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಪ್ರಶಸ್ತಿ ಪ್ರಧಾನ ಮಾಡುವರು. ಸುಳ್ಯ ಶಾಸಕ ಎಸ್.ಅಂಗಾರ ಅತಿಥಿಗಳಾಗುವರು. ಉಪನ್ಯಾಸಕ ಡಾ.ಪೂವಪ್ಪ ಕಣಿಯೂರು ಕೆ.ವಿ.ಜಿ. ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಕೆ.ವಿ.ಜಿ ಸುಳ್ಯ ಹಬ್ಬದ ಅಂಗವಾಗಿ ವೈದ್ಯಕೀಯ ತಪಾಸಣೆ ಹಾಗೂ ಮಾಹಿತಿ ಶಿಬಿರ, ಫುಟ್‍ಬಾಲ್, ಬ್ಯಾಡ್‍ಮಿಂಟನ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ಡಾ. ಕುರುಂಜಿ ವೆಂಕಟ್ರಮಣ ಗೌಡರವರಿಂದ ಸುಳ್ಯದ ಅಭಿವೃದ್ಧಿ ಮತ್ತು ಕೊಡುಗೆಗಳ ಬಗ್ಗೆ ವಿಚಾರ ವಿನಿಮಯ ಕಾರ್ಯಕ್ರಮ ಡಿ.23ರಂದು ಹಮ್ಮಿಕೊಳ್ಳಲಾಗಿದೆ ಎಂದು ಶೈಲೇಶ್ ಅಂಬೆಕಲ್ಲು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಜಯಂತ ರೈ, ಗಂಗಾಧರ ಮಟ್ಟಿ, ಹರೀಶ್ ಬಂಟ್ವಾಳ್ ಇದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ
ಮಂಗಳೂರು | ಕದ್ರಿ ಉದ್ಯಾನದಲ್ಲಿ ಜ.23 ರಿಂದ  ಫಲಪುಷ್ಪ ಪ್ರದರ್ಶನ | 20 ಸಾವಿರಕ್ಕೂ ಅಧಿಕ ಹೂವಿನ ಗಿಡಗಳ ಪ್ರದರ್ಶನ |
January 11, 2025
7:18 AM
by: The Rural Mirror ಸುದ್ದಿಜಾಲ
ಡಿ. 29 | ಕುಂಬಳೆಯಲ್ಲಿ ಕಲಾವಿದ ಕುಂಬಳೆ ಶ್ರೀಧರ ರಾವ್ ಸ್ಮೃತಿ | ‘ಕಲಾ ಶ್ರೀಧರ’ ಕೃತಿ ಅನಾವರಣ |
December 26, 2024
11:28 AM
by: ದ ರೂರಲ್ ಮಿರರ್.ಕಾಂ
ನ.2 ರಿಂದ ಕಲರವ | ಹಕ್ಕಿ-ವನ್ಯ ಜೀವಿ – ಪಕೃತಿ ಛಾಯಾಚಿತ್ರ ಪ್ರದರ್ಶನ |
October 23, 2024
8:32 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror