ಡಿ.24 : ಹರಿಹರ ಪಳ್ಳತ್ತಡ್ಕದಲ್ಲಿ ಅಯ್ಯಪ್ಪ ಪೂಜೋತ್ಸವ ಮತ್ತು ಅಪ್ಪ ಸೇವೆ

December 15, 2019
11:39 AM

ಗುತ್ತಿಗಾರು: ಶ್ರೀ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರ ಹರಿಹರ ಪಳ್ಳತ್ತಡ್ಕದಲ್ಲಿ 25ನೇ ವರ್ಷದ ಪೂಜೋತ್ಸವ ಮತ್ತು 14ನೇ ವರ್ಷದ ಅಪ್ಪ ಸೇವೆ ಹಾಗೂ ಅಗ್ನಿ ಸೇವೆ ಡಿ.24 ರಂದು ನಡೆಯಲಿದೆ.

Advertisement
Advertisement

ಕಾರ್ಯಕ್ರಮವು ಗೋಪಾಲ ಗುರುಸ್ವಾಮಿ , ಮೋಹನ್‌ದಾಸ್ ಗುರುಸ್ವಾಮಿ , ಸೀತಾರಾಮ ಗುರುಸ್ವಾಮಿ , ದಾಮೋದರ ಗುರುಸ್ವಾಮಿ ಹಾಗೂ ಬಾಲಕೃಷ್ಣ ಗುರುಸ್ವಾಮಿ ಪಾಜಪಳ್ಳ ಇವರ ನೇತೃತ್ವದಲ್ಲಿ ನಡೆಯಲಿದೆ. ಡಿ.24 ರಂದು ಬೆಳಗ್ಗೆ ಗಣಪತಿ ಹವನ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ 7 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.

 

ಸಂಜೆ ಗಂಟೆ 5ರಿಂದ ಅಯ್ಯಪ್ಪ ಭಕ್ತಾದಿಗಳು ಕೊಚ್ಚಿ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕಟ್ಟ ಗೋವಿಂದ ನಗರದಿಂದ ಹೊರಟು ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಬಂದು ಅಲ್ಲಿಂದ ಸಂಗಮ ಕ್ಷೇತ್ರ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರಕ್ಕೆ ಮಕ್ಕಳಿಂದ ದೀಪಾರಾಧನೆಯ ಬೆಳಕು ಹಾಗೂ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇವರ ಚೆಂಡೆ ವಾದನದೊಂದಿಗೆ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪಾಲ್ ಕೊಂಬು ಮೆರವಣಿಗೆ ನಡೆಯಲಿರುವುದು.
ಡಿ. 25 ಬುಧವಾರ ಬೆಳಿಗ್ಗೆ ಗಂಟೆ 4 ಕ್ಕೆ ಅಗ್ನಿ ಸೇವೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಾಸಾಯನಿಕ ರಹಿತ ದಂತಮಂಜನ ‘ದಂತಸುರಭಿ’ ಲೋಕಾರ್ಪಣೆ | ಜನಜೀವನ ವಿಷದಿಂದ ಅಮೃತದತ್ತ ಸಾಗಲಿ: ರಾಘವೇಶ್ವರ ಶ್ರೀ ಆಶಯ
July 24, 2025
6:19 AM
by: The Rural Mirror ಸುದ್ದಿಜಾಲ
ವಿಷ್ಣುಗುಪ್ತ ವಿವಿಗೆ ಕರ್ಣಾಟಕ ಬ್ಯಾಂಕ್ ಸಂಶೋಧನಾ ಕೇಂದ್ರ ಕೊಡುಗೆ
July 20, 2025
10:25 PM
by: The Rural Mirror ಸುದ್ದಿಜಾಲ
ನಿರಂತರತೆಗೆ ಇರುವ ಶಕ್ತಿ ಅಪಾರ: ರಾಘವೇಶ್ವರ ಶ್ರೀ
July 18, 2025
10:31 PM
by: The Rural Mirror ಸುದ್ದಿಜಾಲ
ಸಂಪತ್ತಿನಷ್ಟೇ ಸದ್ಭುದ್ಧಿಯೂ ಮುಖ್ಯ – ರಾಘವೇಶ್ವರ ಶ್ರೀ
July 13, 2025
9:37 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group