ಸುಳ್ಯ: ಕೆ.ವಿ.ಜಿ. ದಂತ ಮಹಾವಿದ್ಯಾಲಯದಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ವಿಶ್ವತಂಬಾಕುರಹಿತ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು.
ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಮೋಕ್ಷ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ನಾತಕೋತ್ತರ ದಂತ ವೈದ್ಯಕೀಯ ನಿರ್ದೇಶಕ ಡಾ.ಶರತ್‍ಕುಮಾರ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಶುಭ ಹಾರೈಸಿದರು.
ತಂಬಾಕು ದುಷ್ಪರಿಣಾಮಗಳ ಬಗ್ಗೆ ಉಪನ್ಯಾಸ, ವೀಡಿಯೋ ಪ್ರದರ್ಶನ ಮತ್ತು ಪ್ರತಿಜ್ಞಾ ಬೋದನೆ ದಿನವಿಡೀ ನಡೆದವು. ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದ ರು.
ಕಾರ್ಯಕ್ರಮದಲ್ಲಿ ಬಾಯಿಯರೋಗ ಪತ್ತೆ ಮತ್ತು ಕ್ಷ-ಕಿರಣ ವಿಭಾಗ ಮುಖ್ಯಸ್ಥ ಡಾ.ಜಯಪ್ರಸಾದ ಆನೆಕಾರ ಸ್ವಾಗತಿಸಿದರು. ಡಾ.ದೀಪಿಕಾ ವಂದನಾರ್ಪಣೆಗೈದರು. ಡಾ.ಜಯಲಕ್ಷ್ಮಿ ಮತ್ತು ಡಾ.ಸೀಮಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel