ಸುಳ್ಯ: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡಿನ 2018-19 ನೇ ಸಾಲಿನ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಪೇರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಸ್ಮಾರಕ ತಕ್ವಿಯತುಲ್ ಇಸ್ಲಾಂ ಮದರಸಕ್ಕೆ ಶೇ.100 ಫಲಿತಾಂಶ ದಾಖಲಾಗಿರುತ್ತದೆ.
7 ನೇ ತರಗತಿಯ ಆಯಿಷತ್ ರಫ್ನತ್ ನಿಶಾ 458 ಅಂಕ ಗಳಿಸುವುದರೊಂದಿಗೆ ಮದ್ರಸ ಹಾಗೂ ಸುಳ್ಯ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿರುತ್ತಾರೆ. ಇವರು ದರ್ಖಾಸ್ ಇಬ್ರಾಹೀಂ ಎನ್ ಅವರ ಪುತ್ರಿ.
ಫಾತಿಮತ್ ಸುಮಯ್ಯ 442 ಅಂಕಗಳಿಸುವುದರೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ಹನೀಫ್ ಪೇರಡ್ಕಅವರ ಪುತ್ರಿ ಹಾಗೂ ನೌಶೀನ 442 ಅಂಕ ಗಳಿಸುದರೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ ಇವರು ಪುತ್ತುಮೋನ್ ಅವರ ಪುತ್ರಿ.
5 ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶೇ 100 ಫಲಿತಾಂಶ ದಾಖಲಾಗಿರುತ್ತದೆಯೆಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ .
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel