ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಯಿ ಹಾಗೂ ಮಗನಿಗೆ ಕೊರೊನಾ ಪಾಸಿಟಿವ್ ಪ್ರಕರಣ ಸೋಮವಾರ ಪತ್ತೆಯಾಗಿದೆ. ಮಂಗಳೂರು ಕುಲಶೇಖರದ ನಿವಾಸಿ 80 ವರ್ಷದ ಮಹಿಳೆ ಹಾಗೂ 45 ವರ್ಷದ ಆಕೆಯ ಪುತ್ರನಿಗೆ ಸೋಮವಾರ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಮವಾರ ಬೆಳಗ್ಗೆ 8 ಹೊಸದಾದ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 511 ಕ್ಕೆ ಏರಿಕೆಯಾಗಿದೆ.
ದ ಕ ಜಿಲ್ಲೆಯಲ್ಲಿ ಸೋಮವಾರ ಪತ್ತೆಯಾದ ಕೊರೊನಾ ಪಾಸಿಟಿವ್ ಪ್ರಕರಣದಲ್ಲಿ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಲಶೇಖರದ 80 ವರ್ಷದ ಮಹಿಳೆ ಮಹಿಳೆಗೆ ಬಂಟ್ವಾಳದ 78 ವರ್ಷದ ಮಹಿಳೆಯಿಂದ ಸೋಂಕು ಹರಡಿದಿದೆ ಎಂದು ತಿಳಿದುಬಂದಿದೆ. ಹೀಗಾಗಿ ಕುಲಶೇಖರದ 80 ವರ್ಷದ ಮಹಿಳೆಯ ಪುತ್ರನಿಗೂ ಹರಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel