ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಗಂಭೀರ ಪರಿಸ್ಥಿತಿಗೆ ತಲುಪುತ್ತಿದೆ. ಭಾನುವಾರ ಒಂದೇ ದಿನ ಮೂವರು ಮೃತಪಟ್ಟು, ಬರೋಬ್ಬರಿ 97 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 663ಕ್ಕೆ ಏರಿಕೆಯಾಗಿದೆ. ಇದರಲ್ಲಿ 422 ಮಂದಿ ಗುಣಮುಖರಾದರೆ 238 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ಪತ್ತೆ ಸಂಖ್ಯೆ ಹೆಚ್ಚುತ್ತಿದ್ದು, ಮೂಲ ಪತ್ತೆಯಾಗದೇ ಪಾಸಿಟಿವ್ ಕಾಣಿಸಿಕೊಳ್ಳುತ್ತಿರವುದು ಕೊರೋನಾ ಸಮುದಾಯಕ್ಕೆ ಹಬ್ಬುತ್ತಿರುವ ಆತಂಕ ಉಂಟಾಗಿದೆ.
ಈ ನಡುವೆ ಭಾನುವಾರ ಸುಳ್ಯ ತಾಲೂಕಿನಲ್ಲಿ 4 ಕೊರೋನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಇದರಲ್ಲಿ ಐವರ್ನಾಡಿನ ಇಬ್ಬರು ಯುವಕರು, ಕನಕಮಜಲು ಸುಣ್ಣಮೂಲೆ ಬಳಿಯ ಮಹಿಳೆ, ಸೋಣಂಗೇರಿಯ ವೃದ್ದರೊಬ್ಬರು ಸೇರಿ 4 ಜನರಿಗೆ ಕೊರೊನಾ ಪಾಸಿಟಿವ್ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel