ಸುಳ್ಯ: ಸುಳ್ಯ ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್ ನೇತೃತ್ವದಲ್ಲಿ ದಾನಿಗಳ ಆರ್ಥಿಕ ನೆರವಿನಿಂದ ಮತ್ತು ವಿವಿಧ ಯುವ ಸಂಘಟನೆಗಳ ಶ್ರಮದಾನದಿಂದ ಅಜ್ಜಾವರದಲ್ಲಿ ನಿರ್ಮಿಸಿದ ಮನೆಯನ್ನು ಮಹಮ್ಮದ್ ಕುಂಞಿ ಅವರಿಗೆ ಹಸ್ತಾಂತರಿಸಲಾಯಿತು. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಅಂಗಾರ ಮನೆಯನ್ನು ಉದ್ಘಾಟಿಸಿ ಹಸ್ತಾಂತರಿಸಿದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್ ಎನ್.ಎ.ಕುಂಞಿ ಅಹಮ್ಮದ್, ಅಜ್ಜಾವರ ಗ್ರಾ.ಪಂ.ಅಧ್ಯಕ್ಷೆ ಬೀನಾ ಕರುಣಾಕರ, ನಗರ ಪಂಚಾಯತ್ ಮುಖ್ಯಾಧಿಕಾರಿ ಎನ್.ಮತ್ತಡಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ರಹೀಂ ಬೀಜದಕಟ್ಟೆ, ತಾಜುದ್ದೀನ್, ಗೋಪಾಲಕೃಷ್ಣ ಕರೋಡಿ, ಪದ್ಮನಾಭ ಪಾತಿಕಲ್ಲು, ಶಿಲ್ಪಾ ಸುದೇವ್, ಎ.ಬಿ.ಅಶ್ರಫ್ ಸಹದಿ, ಬೆಳಕು ತಂಡದ ಲೋಕೇಶ್ ಗುಡ್ಡೆಮನೆ, ವಿನೋದ್ ಲಸ್ರಾದೋ ಮತ್ತಿತರರು ಉಪಸ್ಥಿತರಿದ್ದರು. ಶರೀಪ್ ಜಟ್ಟಿಪಳ್ಳ ಸ್ವಾಗತಿಸಿದರು. ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿದರು.
ಮನೆ ಇಲ್ಲದ ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಿಸುವ ‘ಬೆಳಕು’ ಯೋಜನೆಯಡಿ ಅಜ್ಜಾವರದಲ್ಲಿ ನಿರ್ಮಿಸಿದ ಎರಡನೇ ಮನೆ ಇದಾಗಿದೆ. ಒಂದೂವರೆ ತಿಂಗಳಲ್ಲಿ ದಾನಿಗಳ ನೆರವಿನಿಂದ ಅಜ್ಜಾವರದಲ್ಲಿ ಎರಡು ಮನೆಯ ನಿರ್ಮಾಣ ಮಾಡಲಾಗಿದೆ. 18 ದಿನದಲ್ಲಿ ಸುಮಾರು ಎರಡು ಲಕ್ಷ ರೂ ವೆಚ್ಚದಲ್ಲಿ ಎರಡನೇ ಮನೆಯ ನಿರ್ಮಾಣ ಪೂರ್ತಿಯಾಗಿದೆ.