ಸುಳ್ಯ: ಅವಿಭಕ್ತ ಕುಟುಂಬದಲ್ಲಿ ಇದ್ದ ಸರ್ವ ಶ್ರೇಷ್ಟ ಮೌಲ್ಯಗಳು ಇಂದು ನಶಿಸುತ್ತಿವೆ. ತಾಂತ್ರಿಕ ಹಾಗೂ ಮಾಧ್ಯಮಗಳು ಜಗತ್ತನ್ನು ಆಳುವುದರಿಂದ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ಹಾಗೂ ಆದರ್ಶಗಳನ್ನು ಕಲಿಸಿ ಬೆಳೆಸಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಪ್ರೊ. ಶ್ರೀಧರ ಎಚ್.ಜಿ ಹೇಳಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸುವಿಚಾರಸಾಹಿತ್ಯ ವೇದಿಕೆ ಸುಳ್ಯ , ಸಂದ್ಯಾಚೇತನ ಹಿರಿಯ ನಾಗರಿಕರ ಸಂಘ,ಸಂದ್ಯಾರಶ್ಮಿ ಪಿಂಚಣಿದಾರರ ಸಂಘ ಸುಳ್ಯ ಇವರ ಆಶ್ರಯದಲ್ಲಿ ನಡೆದ ದಿ.ಪಡ್ಡಂಬೈಲ್ ವೆಂಕಟ್ರಮಣ ಗೌಡ ಸ್ಮಾರಕ ಉಪನ್ಯಾಸ ಕಾರ್ಯಕ್ರಮಲ್ಲಿ ‘ಪಡ್ಡಂಬೈಲು ಅವರ ಜೀವನ ಮೌಲ್ಯಗಳು’ ಎಂಬ ವಿಷಯದಲ್ಲಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನೇತ್ರಾವತಿ ಪಡ್ಡಂಬೈಲ್ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸಂಧ್ಯಾಚೇತನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷರಾದ ರಂಗಯ್ಯ ,ಸಂಧ್ಯಾರಶ್ಮಿ ಪಿಂಚಣಿದಾರರ ಸಂಘದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಸುವಿಚಾರ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಗಿರಿಜಾ ಎಂ. ವಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಚಂದ್ರಶೇಖರ್ ಪೆರಾಲು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀರಬಿದಿರೆ ನಾರಾಯಣ ವಂದಿಸಿದರು. ರೇಖಾ ಶೇಟ್ ಕಾರ್ಯಕ್ರಮ ನಿರೂಪಿಸಿದರು.