ಸುಳ್ಯ: ಭಾನುವಾರ ರಾತ್ರಿ 9 ಗಂಟೆಗೆ… 9 ನಿಮಿಷಗಳ ಕಾಲ ದೀಪ ಹಚ್ಚೋಣ. ಹಣತೆಯ ದೀಪವಾದರೆ ಉತ್ತಮ. ದೀಪ ಬೆಳಗುವುದು ಎಂದರೆ ಕೇವಲ ದೀಪವಲ್ಲ ಅದರಲ್ಲೊಂದು ಶಕ್ತಿ ಇದೆ. ಆತ್ಮಬಲ ಸಿಗಲಿದೆ. ಹೀಗೆಂದು ಜ್ಯೋತಿಷ್ಯದ ವಿವರಣೆಯೂ ಇದೆ.
ದೀಪ ಹಚ್ಚುವ ಸಮಯದಲ್ಲಿ ಸಾಧ್ಯವಿದ್ದವರು ಈ ಸಾಲುಗಳನ್ನು ಹೇಳಿದರೆ ಇನ್ನೂ ಉತ್ತಮ
ಪೃತನಾಜಿತಗ್ಂ ಸಹಮಾನಮುಗ್ರಮಗ್ನಿಗ್ಂ ಹುವೇಮ
ಪರಮಾತ್ ಸಧಸ್ಥಾತ್ | ಸ ನ: ಪರ್ಷದತಿ ದುರ್ಗಾಣಿ ವಿಶ್ವಾ
ಕ್ಷಾಮದ್ದೇವೋ ಅತಿ ದುರಿತಾತ್ಯಗ್ನಿ: |
ಅಂದರೆ ,ಈ ವಾಕ್ಯವು ಅಗ್ನಿದೇವನ ಸ್ತುತಿ.
ಶತ್ರುಸೇನೆಯನ್ನು ಪೃತನಾ ಎನ್ನುವರು. ಇದನ್ನು ಜಯಿಸುವವನು ಪೃತನಾಜಿತನು. ಸಹಾಮಾನವೆಂದರೆ ಶತ್ರುಗಳನ್ನು ಹಿಮ್ಮೆಟ್ಟಿಸುವವನು ಎಂದರ್ಥ. ಈ ಎರಡೂ ಗುಣಗಳುಳ್ಳ ಉಗ್ರನೂ ಆದ ಅಗ್ನಿಯು ಉತ್ಕೃಷ್ಟವಾದ ದೇಶದಲ್ಲಿ ತನ್ನ ಸೇವಕರೊಡಗೂಡಿನ ಇದ್ದುಕೊಂಡಿರುವನಷ್ಟೇ, ಅವನನ್ನು ಆಹ್ವಾನಿಸುವೆವು. ಅವನು ನಮ್ಮ ಅತಿ ಕಷ್ಟಕರವಾದ ಸನ್ನಿವೇಶಗಳನ್ನೆಲ್ಲ ನಾಶಗೊಳಿಸುವವನಾಗಲಿ ಮತ್ತು ಅಗ್ನಿ ದೇವನು ಅಪರಾಧಿಗಳಾದ ನಮ್ಮನ್ನು ಕ್ಷಮಿಸುವವನಾಗಿ ದುರಿತಗಳನ್ನೆಲ್ಲ ದೂರ ಮಾಡಿ ಶುದ್ದರಾಗುವಂತೆ ಮಾಡಲಿ ಎಂದರ್ಥ.
ಪ್ರಧಾನಿ ನರೇಂದ್ರ ಮೋದಿ ಅವರು ಹಣತೆ ಹಚ್ಚಲು ಹೇಳಿದ್ದಾರೆ, ಇದು ಭಾರತದಂತಹ ಆಧ್ಯಾತ್ಮ ಮೂಲದ ದೇಶದಲ್ಲಿ ಹೆಚ್ಚು ಪ್ರಭಾವ ಬೀರುವ ಸಂಗತಿಯಾಗಿದೆ. ಪ್ರತಿಯೊಬ್ಬರೂ ಇದರ ಆಚರಣೆ ಮಾಡಿದರೆ ದೈವೀಕ ಶಕ್ತಿ, ಆಯುರ್ವೇದ ಶಕ್ತಿ ಹೊಂದಿರುವ ಈ ದೇಶದಲ್ಲಿ ಹೆಚ್ಚು ಪರಿಣಾಮ ಬೀರಬಲ್ಲುದು ಎಂದು ಸುಳ್ಯದ ವಳಲಂಬೆಯ ವೇದ ವಿದ್ವಾಂಸರಾದ ಕರುವಜೆ ಕೇಶವ ಜೋಯಿಸರು ಹೇಳುತ್ತಾರೆ. ಪೃತನಾಜಿತಗ್ಂ….. ಸಾಲುಗಳು ಕೂಡಾ ದೇಶಕ್ಕೆ ಬಲ ತುಂಬಲಿದೆ ಎನ್ನುತ್ತಾರೆ ಕರುವಜೆ ಕೇಶವ ಜೋಯಿಸರು.