ದೆಹಲಿ ಗಣರಾಜ್ಯೋತ್ಸವ ಪೆರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಯ್ಕೆ

January 4, 2020
3:38 PM

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ತೃತೀಯ ಬಿಎಸ್‍ಸಿ ವಿದ್ಯಾರ್ಥಿನಿ ಜೂನಿಯರ್ ಅಂಡರ್ ಆಫೀಸರ್ ಪ್ರಿಯಾ ಡಿ. ಅವರು ಜ.26ರಂದು ದೆಹಲಿಯ ರಾಜಪಥ್‍ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥ ಸಂಚಲನಕ್ಕೆ ಆಯ್ಕೆಯಾಗಿದ್ದಾರೆ. ಹಾಗೆಯೇ ಕಾಲೇಜಿನ ದ್ವಿತೀಯ ಬಿಎಸ್‍ಸಿ ವಿದ್ಯಾರ್ಥಿನಿ ಸಾರ್ಜಂಟ್ ಅಂಕಿತ ವಿ.ಕೆ. ಅವರು ಜ.27ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

Advertisement
ಅಂಕಿತ. ವಿ. ಕೆ

ಇಬ್ಬರು ಎನ್‍ಸಿಸಿ ಕೆಡೆಟ್‍ಗಳು ಅಕ್ಟೋಬರ್‍ನಿಂದ ಜನವರಿಯವರೆಗೆ ದೇಶದ ವಿವಿಧೆಡೆ ನಡೆದ ಎಂಟು ಪೂರ್ವ ಸಿದ್ಧತಾ ಸುತ್ತನ್ನು ಯಶಸ್ವಿಯಾಗಿ ಪೂರೈಸಿ ಕರ್ನಾಟಕ ಮತ್ತು ಗೋವಾ ಡೈರಕ್ಟರೇಟ್‍ನ ಮಡಿಕೇರಿ ಬೆಟಾಲಿಯನ್‍ನ ಪ್ರತಿನಿಧಿಗಳಾಗಿ ಪ್ರಧಾನಿಯವರು ಭಾಗವಹಿಸುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ಪ್ರಿಯಾ ಡಿ. ಅವರು ಕನ್ಯಾನ ನಿವಾಸಿ ನಿವೃತ್ತ ಸೇನಾನಿ ರಾಮ ಡಿ. ಮತ್ತು ಹೇಮಾ ಡಿ. ದಂಪತಿ ಪುತ್ರಿಯಾಗಿದ್ದಾರೆ. ಅಂಕಿತ ವಿ.ಕೆ. ಅವರು ಬಲ್ನಾಡು ನಿವಾಸಿ ಪೊಲೀಸ್ ಉದ್ಯೋಗಿ ಕೃಷ್ಣಪ್ಪ ಗೌಡ ಬಿ. ಮತ್ತು ಶಿಕ್ಷಕಿ ಹರಿಣಾಕ್ಷಿ ಎ. ದಂಪತಿ ಪುತ್ರಿಯಾಗಿದ್ದಾರೆ.

ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅತುಲ್ ಶೆಣೈ ಅವರು ಈ ಕೆಡೆಟ್‍ಗಳಿಗೆ ವಿವಿಧ ಹಂತದಲ್ಲಿ ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ
ಹಾವು, ಕಾಗೆ, ನಾಯಿಗಳು ಕನಸಿನಲ್ಲಿ ಬಂದ್ರೆ ನಿರ್ಲಕ್ಷ್ಯ ಮಾಡ್ಬೇಡಿ…!
April 22, 2025
6:41 AM
by: ದ ರೂರಲ್ ಮಿರರ್.ಕಾಂ
ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ | ಆಲಿಕಲ್ಲು, ಗುಡುಗು ಸಹಿತ ಭಾರಿ ಮಳೆ
April 22, 2025
6:30 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group