ದೇಲಂಪಾಡಿಯ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ “ಅರ್ಜುನ ತೀರ್ಥಯಾತ್ರೆ” ಯಕ್ಷಗಾನ ತಾಳಮದ್ದಳೆ

October 28, 2019
9:08 PM

ಸುಳ್ಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಸಭಾಭವನದಲ್ಲಿ  “ಅರ್ಜುನ ತೀರ್ಥಯಾತ್ರೆ” ಯಕ್ಷಗಾನ ತಾಳಮದ್ದಳೆ ಜರಗಿತು.

Advertisement
Advertisement

ರಾಮಯ್ಯ ರೈ ಕಲ್ಲಡ್ಕ ಗುತ್ತು ಹಾಗೂ ಮನೆಯವರಿಂದ ಸೇವಾರೂಪವಾಗಿ ನೆರವೇರಿಸಲ್ಪಟ್ಟ ಈ ಕಲಾ ಕಾರ್ಯಕ್ರಮದ ಮೊದಲಿಗೆ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಹಿರಿಯ ಭಾಗವತ ವಿಶ್ವವಿನೋದ ಬನಾರಿ ಅವರ ನಿರ್ದೇಶನದಲ್ಲಿ ಅನಂತರ ನಡೆದ ತಾಳಮದ್ದಳೆಯ ಭಾಗವತರಾಗಿ ನಾರಾಯಣ ತೋರಣಗಂಡಿ, ದಯಾನಂದ ಬಂದ್ಯಡ್ಕ, ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ ಕಾಣಿಸಿಕೊಂಡರು. ಚೆಂಡೆ ಮದ್ದಳೆ ಚಕ್ರತಾಳದಲ್ಲಿ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿ, ಕಲ್ಲಡ್ಕ ಶಿವರಾಮ ಕಲ್ಲೂರಾಯ, ವಿಷ್ಣುಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ, ವಿದ್ಯಾಭೂಷಣ ಪಂಜಾಜೆ, ಕೃಷ್ಣಪ್ಪ ಗೌಡ ಕುತ್ತಿಮುಂಡ, ಬೆಳ್ಳಿಪ್ಪಾಡಿ ಹಳೆಮನೆ ವೆಂಕಪ್ಪ ಗೌಡ ಅವರು ಸಹಕರಿಸಿದರು.

ಅತಿಥಿ ಕಲಾವಿದರಾಗಿ ಆಗಮಿಸಿದ ಕಟೀಲು ಮೇಳದ ಹಾಸ್ಯಗಾರ ರವಿಶಂಕರ ವಳಕುಂಜ ಅವರು ತಮ್ಮ ಅರ್ಥಗಾರಿಕೆಯಲ್ಲಿ ಹಾಸ್ಯದ ಹೊನಲನ್ನು ಹರಿಸಿ ಸಭಾಸದರನ್ನು ರಂಜಿಸಿದರು. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ಯಂ. ರಮಾನಂದ ರೈ ದೇಲಂಪಾಡಿ, ಎ.ಜಿ ಮುದಿಯಾರು, ರಾಮನಾಯ್ಕ್ ದೇಲಂಪಾಡಿ ಅವರು ಮಿಕ್ಕುಳಿದ ಪಾತ್ರಗಳಲ್ಲಿ ಕಾಣಿಸಿಕೊಂಡರು. ಗೋಪಾಲಕೃಷ್ಣ ರೈ ಮುದಿಯಾರು ಸ್ವಾಗತಿಸಿ ಮಿಥುನ್ ರೈ ಕಲ್ಲಡ್ಕ ವಂದಿಸಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ರಾಶಿಯ ದಂಪತಿಗಳಿಗೆ ಸಂವಹನದ ಕೊರತೆಯಿಂದ ತೊಂದರೆ
July 23, 2025
6:25 AM
by: ದ ರೂರಲ್ ಮಿರರ್.ಕಾಂ
ಜು.30 ರಂದು ನಿಸಾರ್ ಭೂ ವಿಶ್ಲೇಷಣಾ ಉಪಗ್ರಹ ಉಡಾವಣೆ
July 23, 2025
6:13 AM
by: The Rural Mirror ಸುದ್ದಿಜಾಲ
ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group