ದೇವಚಳ್ಳ: ದೇವಚಳ್ಳ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮುಂಡೋಡಿ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ಪಿ. ಡಿ. ಓ ಕಾವ್ಯ ಸಿ. ಎನ್ , ಕಾರ್ಯದರ್ಶಿ ಗುರುಪ್ರಸಾದ್ ಮತ್ತು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭುವನೇಶ್ವರಿ ಹೆಚ್, ಸದಸ್ಯರಾದ ಕೃಷ್ಣಯ್ಯ ಮೂಲೆತೋಟ , ಶೈಲೇಶ್ ಅಂಬೆಕಲ್ಲು , ಪುಷ್ಪಾಕರ ಮಾವಿನಕಟ್ಟೆ, ಶಿವಪ್ರಕಾಶ್ ಅಡ್ಡನಪಾರೆ , ಮೋಹಿನಿ ಅಡ್ಡನಪಾರೆ, ಸರಸ್ವತಿ ತಳೂರು , ಉಷಾ ದೇವ ಉಪಸ್ಥಿತರಿದ್ದರು.
ಸಭೆಯಲ್ಲಿ ಅ.2 ಗಾಂಧೀಜಯಂತಿ ದಿನದಂದು ಗ್ರಾಮ ವ್ಯಾಪ್ತಿಯ ಮಾವಿನಕಟ್ಟೆ ಬಸ್ಸು ತಂಗುದಾಣದಿಂದ ದೇವ ಬಸ್ಸು ತಂಗುದಾಣದವರಿಗೆ ಬದಿಗಳನ್ನು ಸ್ವಚ್ಛ ಗೊಳಿಸುವ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದಿಂದಮಾಡುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ದೇವಚಳ್ಳ ಗ್ರಾಮದಲ್ಲಿ ಡೆಂಘೆ ಪ್ರಕರಣ ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕೇವಲ ಒಂದೆರಡು ಬಿಟ್ಟರೆ ಉಳಿದದಂತೆ ಆರೋಗ್ಯಕರ ವಾತವರಣ ಇದೆ ಎಂದು ಕಿರಿಯ ಆರೋಗ್ಯ ಸಹಾಯಕ ಬಸವರಾಜು ಅವರು ಹರ್ಷ ವ್ಯಕ್ತ ಪಡಿಸಿದರು. ಆಶಾ ಕಾರ್ಯ ಕರ್ತ್ಯೆಯರು ಮತ್ತು ಇಲಾಖೆಯ ಎಲ್ಲಾ ಸಿಬ್ಬಂದಿಗಳ ಲಾರ್ವಾ ಸರ್ವೇ ಫಾಗಿಂಗ್ ಮಾಡುವ ಮೂಲಕ ಸೊಳ್ಳೆ ಉತ್ಪತಿ ತಡೆಯುವಲ್ಲಿ ಶ್ರಮವಹಿಸಿದ್ದಾರೆ ಎಂದರು.
ಅದೇ ದಿನ ಅಪರಾಹ್ನ ಕೆಡಿಪಿ ಸಭೆ ನಡೆಸಲಾಯಿತು. ಗ್ರಾಮ ವ್ಯಾಪ್ತಿಯ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಆರೋಗ್ಯ ಇಲಾಖೆ, ಗ್ರಂಥಾಲಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಪಶುಸಂಗೋಪನೆ ಇಲಾಖೆಯ ಅಧಿಕಾರಿ, ಆಶಾಕಾರ್ಯಕರ್ತೆಯರು ಹಾಲು ಉತ್ಪಾದಕರ ಸಹಕಾರ ಸಂಘಧವರು, ಕೃಷಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು. ಆಯಾಯ ಇಲಾಖೆಗಳ ಮಾಹಿತಿ ನೀಡಿದರು.