ದೇವಚಳ್ಳ: ದೇವಚಳ್ಳ ಗ್ರಾಮ ಪಂಚಾಯತ್, ಶ್ರೀ ವಿಷ್ಣು ಯುವಕ ಮಂಡಲ, ಶಾಲಾ ಪೋಷಕರು ಹಾಗೂ ಸ್ಥಳೀಯರ ಆಶ್ರಯದಲ್ಲಿ ಮಾವಿನಕಟ್ಟೆಯಿಂದ ಅಚ್ರಪ್ಪಾಡಿವರೆಗೆ “ಸ್ವಚ್ಛತಾ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿತ್ತು.
ನಂತರ ಅಚ್ರಪ್ಪಾಡಿ ಶಾಲೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಮುಂಡೋಡಿ,ದೇವಾಚಳ್ಳ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರುಪ್ರಸಾದ್, ಸರ್ವ ಸದಸ್ಯರು, ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ ಶ್ರೀ ವಿಷ್ಣು ಯುವಕ ಮಂಡಲ ಕಾರ್ಯದರ್ಶಿ ಅಖಿಲ್ ಅಚ್ರಪ್ಪಾಡಿ ಹಾಗೂ ಅಚ್ರಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಸುಂದರಿ ಉಪಸ್ಥಿತರಿದ್ದರು.
ಈ ಸಂದರ್ಭ ಶಾಲಾ ಮಕ್ಕಳಿಂದ ಭಾಷಣ ನಡೆಯಿತು. ದಿವಾಕರ ಮುಂಡೋಡಿ ಇವರಿಂದ ಪ್ರತಿಜ್ಞಾ ವಿಧಿ ವಾಚನ, ಗಾಂಧಿ ಜಯಂತಿ ಸ್ಮರಣಾರ್ಥ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಅಚ್ರಪ್ಪಾಡಿ ಅಂಗನವಾಡಿ ಕಾರ್ಯಕರ್ತೆ ಸುಂದರಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳ ಗುರಿ ಹಾಗೂ ಉದ್ದೇಶದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ನಿರೂಪಣೆ ಮತ್ತು ಸ್ವಾಗತ ಶ್ವೇತಾ ಹಾಗೂ ಸವಿತಾ ಧನ್ಯವಾದ ಗೈದರು.