ಸುಳ್ಯ: ದೇಶದ ಆರ್ಥಿಕ ಸ್ಥಿತಿ ಪಾತಾಳಕ್ಕೆ ಇಳಿದಿದೆ. ಐದು ರೂ. ಬೆಲೆಯ ಬಿಸ್ಕೆಟ್ ಕೂಡ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದು ಸುಳ್ಯ ಕಾಂಗ್ರೆಸ್ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಆರ್ಥಿಕ ಬೆಳವಣಿಗೆ ಇಲ್ಲದೆ ಬಿಸ್ಕೆಟ್ ಕಂಪೆನಿಗಳು ಕೂಡ ಉತ್ಪಾದನೆ ಕಡಿತ ಮಾಡಿ ಕಾರ್ಮಿಕರನ್ನು ತೆಗೆದು ಹಾಕುತ್ತಿದೆ. ಕೇಂದ್ರ ಸರಕಾರದ ಆರ್ಥಿಕ ನೀತಿಗಳೇ ಇದಕ್ಕೆ ಕಾರಣ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಜೊತೆಗೆ ದೇಶದ ವಾಕ್ ಸ್ವಾತಂತ್ರ್ಯಕ್ಕೂ ಕುತ್ತುಬರಹುದಾದ ದಿನಗಳು ದೂರವಿಲ್ಲ ಎಂದರು. ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರ ಬಂಧನ ರಾಜಕೀಯ ಪ್ರೇರಿತವಾಗಿ ನಡೆದಿದೆ. ಸುಳ್ಯ ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಧರ್ಮಪಾಲ ಗೌಡ ಕೊಯಿಂಗಾಜೆ, ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ದಿಕ್ ಪ್ರಮುಖರಾದ ನಂದರಾಜ ಸಂಕೇಶ, ಅಚ್ಚುತ ಮಲ್ಕಜೆ, ಲಕ್ಷ್ಮಣ ಶಣೈ ಉಪಸ್ಥಿತರಿದ್ದರು.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel