ಧರ್ಮಸ್ಥಳ : ಕನ್ನಡ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಸುದೀರ್ಘಇತಿಹಾಸವಿದೆ. ಈ ಸಾಹಿತ್ಯ ಅನೇಕ ರೂಪಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯಿತು.ಇವುಗಳಲ್ಲಿ ಕೀರ್ತನೆಯು ಅಥವಾ ಭಜನೆಯು ಒಂದು. ಇದು ಭಕ್ತಿ ಪಂಥವು ಬಳಸಿದ ಒಂದು ಪ್ರಮುಖ ಸಂವಹನ ಮಾಧ್ಯಮವಾಯಿತು.
ನೂತನವಾದ ಭಜನಾ ಪರಂಪರೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪದ್ಮವಿಭೂಷಣ ಡಾ.ವೀರೇಂದ್ರ ಹೆಗ್ಗಡೆಯವರು ತಮ್ಮ ಬಾಲ್ಯದಲ್ಲಿ ಭಜನಾ ಸಂಸ್ಕೃತಿಯಲ್ಲೇ ಬೆಳೆದವರು. ಹೆಗ್ಗಡೆಯವರು ಸಮಾಜದಲ್ಲಿ ಶಾಂತಿ, ಸಹಬಾಳ್ವೆ, ಸಾಮರಸ್ಯಗಳನ್ನು ಮೂಡಿಸುವ ಕನಸು ಕಂಡು ಇದನ್ನು ಸಾಕಾರಗೊಳಿಸುವ ಉದ್ದೇಶಕ್ಕಾಗಿ ಆರಿಸಿಕೊಂಡ ಮಾಧ್ಯಮಭಜನಾತರಬೇತಿ ಶಿಬಿರ ಮತ್ತು ಹಾಗೂ ಸ0ಸ್ಕೃತಿ ಸ0ವರ್ಧನಾ ಕಾರ್ಯಗಾರದ ಈ ಭಜನಾತರಬೇತಿಶಿಬಿರಕ್ಕೆ ಚಾಲನೆ ದೊರಕಿದ್ದು1999 ನೇ ಇಸವಿಯಒಕ್ಟೋಬರ್ ತಿಂಗಳಲ್ಲಿ ಪ್ರಾರಂಭವಾಗಿ ಪ್ರಸ್ತುತ 21 ನೇ ವರ್ಷಕ್ಕೆ ಕಮ್ಮಟವು ಯಶಸ್ವಿಯಾಗಿ ನಡೆಯುತ್ತಿದೆ.
ಭಜನಾಕಮ್ಮಟದ ವೈಶಿಷ್ಠ್ಯಗಳು: ಭಜನಾಕಮ್ಮಟದಲ್ಲಿದಾಸ ಸಾಹಿತ್ಯ ವಚನಗಳನ್ನು, ಇತರ ಭಕ್ತಿಗೀತೆಗಳನ್ನು, ಸಂಪನ್ಮೂಲ ವ್ಯಕ್ತಿಗಳಿಂದ ಕಲಿಸಿಕೊಡುವುದು.ರಾಗ, ತಾಳ, ಲಯದೊಂದಿಗೆ ಹಾಡುಗಳ ಅಧ್ಯಯನ, ಕುಣಿತ ಭಜನೆಯನ್ನು ಹೇಳಿಕೊಡಲಾಗುತ್ತಿದೆ. ಯೋಗದೊಂದಿಗೆ ದಿನಚರಿ ಪ್ರಾರಂಭ. ನಗರ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಚರಿಅಂತ್ಯ.7 ದಿನಗಳ ಕಾಲ ನಡೆಯುವ ಭಜನಾತರಬೇತಿ ಕಮ್ಮಟ.
ಭಜನಾಕಮ್ಮಟದಲ್ಲಿ ಇದುವರೆಗೆ 2058 ಮಂಡಳಿಯ 4090 ಮಂದಿಗೆ ತರಬೇತಿ ನೀಡಲಾಗಿದೆ. ಭಜನಾ ತರಬೇತಿ ಕಮ್ಮಟದಕೊನೆಯ ದಿನ. ಈ ಹಿಂದೆ ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸಿದ ಭಜನಾರ್ಥಿಗಳೊಂದಿಗೆ ದ.ಕ, ಉಡುಪಿ ಜಿಲ್ಲೆ, ಕಾಸರಗೋಡು, ಉ.ಕ, ಶಿವಮೊಗ್ಗ ಜಿಲ್ಲೆಯ ಭಜನಾ ಮಂಡಳಿಗಳ ಭಜಕರು ಶೋಭಾಯಾತ್ರೆಯಲ್ಲಿ ಭಜನಾ ಸೇವೆಯನ್ನು ಶ್ರೀ ಮಂಜುನಾಥ ಸ್ವಾಮಿಗೆ ಸಮರ್ಪಿಸಿ ಹೆಗ್ಗಡೆಯವರು ಕಮ್ಮಟದ ಶಿಬಿರಾರ್ಥಿಗಳ ಹಾಗೂ ಇತರಗಣ್ಯರ ಉಪಸ್ಥಿತಿಯಲ್ಲಿ ಕುಣಿತ ಭಜನೆ ಹಾಗೂ ಗಣ್ಯರ ಸಂದೇಶದೊಂದಿಗೆ ಸಮಾಪನಗೊಳ್ಳುತ್ತದೆ.
ಭಜನಾ ಮಂಗಲೋತ್ಸವದಲ್ಲಿ ಇದುವರೆಗೆ ನಾಡಿನ ಸುಮಾರು 6,500 ಮಂಡಳಿಯ 95,000 ಕ್ಕಿಂತಲೂಅಧಿಕ ಭಜಕರು ಭಾಗವಹಿಸಿ ಬದುಕನ್ನು ಸಾರ್ಥಕ್ಯಪಡಿಸಿಕೊಂಡಿದ್ದಾರೆ.
ಭಜನಾ ತರಬೇತಿ ಕಮ್ಮಟದಲ್ಲಿ ತರಬೇತಿ ಪಡಕೊಂಡ ಮಂಡಳಿಗಳು ತಮ್ಮತಮ್ಮಊರಿನಲ್ಲಿ ಭಜನೆ ಎಂಬ ಭಕ್ತಿಯ ಬೆಳಕನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಭಜನಾ ಮಂಡಳಿಗಳು ಊರಿನಧಾರ್ಮಿಕ ಶ್ರದ್ಧಾಕೇಂದ್ರವಾಗಿ ಮಾತ್ರವಲ್ಲದೆ ಸಾಮಾಜಿಕ ಪರಿವರ್ತನೆಯ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ.ಗ್ರಾಮೀಣ ಭಾಗದ ಸ್ವಚ್ಛತೆ, ಕಾನೂನು ಮಾಹಿತಿ, ಆರೋಗ್ಯ ಮಾಹಿತಿ, ಶ್ರಮದಾನ, ಯಕ್ಷಗಾನ ಸಂಗೀತ, ಭರತನಾಟ್ಯ ತರಬೇತಿ ಕೇಂದ್ರ, ರಕ್ತದಾನ ಶಿಬಿರ, ಮಕ್ಕಳಿಗೆ ಪುಸ್ತಕ ವಿತರಣೆ, ಪರಿಸರ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ ಬೆಳೆಸುವ ರಾಷ್ಟ್ರೀಯ ಹಬ್ಬ, ಧಾರ್ಮಿಕ ಕಾರ್ಯಕ್ರಮಗಳ ಸಂಘಟನೆಯನ್ನು ಮಾಡುತ್ತಿದೆ.ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಭಜನಾ ಮಂಡಳಿಗಳ ಕಟ್ಟಡ ನಿರ್ಮಾಣ, ಇನ್ನಿತರ ಮೂಲಸೌಕರ್ಯಗಳು ಸಾಕಷ್ಟು ಅನುದಾನಕೂಡ ನೀಡಲಾಗುತ್ತದೆ.
ಭಜನಾಕಮ್ಮಟದ ಯಶಸ್ವಿಗೆ ರೂಪುರೇಷೆ ಹಾಕಿ ಮಾರ್ಗದರ್ಶನ ನೀಡುವವರು ಪೂಜ್ಯನೀಯ ಡಾ.ವೀರೇಂದ್ರ ಹೆಗ್ಗಡೆಯವರು, ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆಯವರು ಕಮ್ಮಟದ ಯಶಸ್ವಿ ಅನುಷ್ಠಾನಕ್ಕೆ ಸಹಕಾರ ನೀಡುವವರು ಡಿ. ಹರ್ಷೇಂದ್ರಕುಮಾರ್, ಸುಪ್ರಿಯ ಹರ್ಷೇಂದ್ರಕುಮಾರ್, ಹಾಗೂ ಕುಟುಂಬಸ್ಥರು ಕಮ್ಮಟದ ಯಶಸ್ವಿಗೆ ಪೂರಕವಾಗಿ ಯೋಜನಾ ಬದ್ಧವಾಗಿ ಕೆಲಸ ಮಾಡುವವರು. ಭಜನಾ ತರಬೇತಿ ಕಮ್ಮಟದ ಕಾರ್ಯಕಾರಿ ಮಂಡಳಿಯ ಸದಸ್ಯರು ಸಂಘಟನೆಗೆ ಬಲನೀಡುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು, ಶ್ರೀ ಕ್ಷೇತ್ರದ ಸಿಬ್ಬಂದಿಗಳು ಹಾಗೂ ಕ್ಷೇತ್ರದ ಸ್ವಯಂಸೇವಕರು.