ಧರ್ಮಸ್ಥಳದಲ್ಲಿ ಪಿಲಿ ನಲಿಕೆ ವೈಭವ : ಹುಲಿಗಳು ಸಾರ್, ಹುಲಿಗಳು…….!!

October 2, 2019
10:30 AM

ಧರ್ಮಸ್ಥಳ:  ಅರಣ್ಯ ನಾಶ ಹಾಗೂ ಕಾಡಿನಲ್ಲಿ ಆಹಾರದ ಕೊರತೆಯಿಂದ ಅನಿವಾರ್ಯವಾಗಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತವೆ. ಪ್ರಾಕೃತಿಕ ಅಸಮತೋಲನದಿಂದಾಗಿ ಹಾಗೂ ಅರಣ್ಯ ನಾಶದಿಂದ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆಯಾಗುತ್ತಿದೆ. ಅರಣ್ಯ ಸಂರಕ್ಷಣೆಯೊಂದಿಗೆ ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

Advertisement
Advertisement
Advertisement

ಅವರು ಮಂಗಳವಾರ ಧರ್ಮಸ್ಥಳದಲ್ಲಿ ನೂರು ಹುಲಿಗಳ ಪಿಲಿ ನಲಿಕೆ ವೈಭವ ಹಾಗೂ ಕಾಡು ಪ್ರಾಣಿಗಳ ನೃತ್ಯವನ್ನು ವೀಕ್ಷಿಸಿ ಸಂತಸದಿಂದ ಅವುಗಳನ್ನು ಹರಸಿ ಮಾತನಾಡಿದರು.
ನೀವು ಬದುಕಿ, ನಮ್ಮನ್ನೂ ಬದುಕಲು ಬಿಡಿ ಎಂದು ಎಲ್ಲಾ ಕಾಡು ಪ್ರಾಣಿಗಳು ಹೆಗ್ಗಡೆಯವರಿಗೆ ಮೌಖಿಕ ಮನವಿ ಅರ್ಪಿಸಿದವು. ಹೆಗ್ಗಡೆಯವರು ಸಂತೋಷದಿಂದ ಎಲ್ಲಾ ಪ್ರಾಣಿಗಳಿಗೂ ಶುಭ ಹಾರೈಸಿದರು.

Advertisement

ಪಿಲಿ ನಲಿಕೆ ಸಂಯೋಜಕ ಹಾಗೂ ಸ್ವತಃ ಹುಲಿ ವೇಷಧಾರಿಯಾಗಿ ಖ್ಯಾತರಾದ ಮಂಗಳೂರಿನ ಮಿಥುನ್ ರೈ ಅವರ ಕಾಳಜಿಯನ್ನು ಹೆಗ್ಗಡೆಯವರು ಶ್ಲಾಘಿಸಿ ಅಭಿನಂದಿಸಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ವನ್ಯಜೀವಿಗಳ ಸಂರಕ್ಷಣೆಯಲ್ಲಿ ವಿಶೇಷವಾಗಿ ಯುವಜನತೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಬೆಳ್ತಂಗಡಿ ತಾಲೂಕಿನಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ವಿಶೇಷ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದರು.

Advertisement

ಪಿಲಿನಲಿಕೆ ಸಂಯೋಜಕ ಮಿಥುನ್ ರೈ ಶುಭಾಶಂಸನೆ ಮಾಡಿದರು. ಉಜಿರೆಯ ಎಸ್.ಡಿ.ಎಮ್. ಕಾಲೇಜಿನ ಲಲಿತಕಲಾ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಾಡು ಪ್ರಾಣಿಗಳ ನೃತ್ಯ ಸಂಯೋಜನೆ ಪ್ರೇಕ್ಷಕರ ವಿಶೇಷ ಮೆಚ್ಚುಗೆ ಹಾಗೂ ಅಭಿನಂದನೆಗೆ ಪಾತ್ರವಾಯಿತು. ನವದುರ್ಗೆಯರು ಧರೆಗಿಳಿದು, ಮಹಿಷಾಸುರ ಮರ್ದನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಹೇಮಾವತಿ ವಿ, ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಡಿ. ಶ್ರೇಯಸ್ ಕುಮಾರ್, ಕು. ಮಾನ್ಯ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 25-11-2024 | ಒಣ ಹವೆ ಮುಂದುವರಿಕೆ | ನವೆಂಬರ್ ಕೊನೆಯ ತನಕವೂ ಮಳೆಯ ಸಾಧ್ಯತೆ ಇಲ್ಲ |
November 25, 2024
2:57 PM
by: ಸಾಯಿಶೇಖರ್ ಕರಿಕಳ
ಗದಗದ ಲಕ್ಕುಂಡಿಯಲ್ಲಿ ಪ್ರಾಚ್ಯಾವಶೇಷಗಳ ಅನ್ವೇಷಣೆ ಕಾರ್ಯಕ್ರಮಕ್ಕೆ ಚಾಲನೆ
November 25, 2024
7:33 AM
by: The Rural Mirror ಸುದ್ದಿಜಾಲ
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ
November 25, 2024
7:26 AM
by: The Rural Mirror ಸುದ್ದಿಜಾಲ
ಮಲೆನಾಡಿನಲ್ಲಿ ಕಾಡಾನೆ ಹಾವಳಿ ತಡೆಗೆ ಅಧಿವೇಶನದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ
November 25, 2024
7:15 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror