ಧರ್ಮಸ್ಥಳದಲ್ಲಿ ಶಾಸನಶಾಸ್ತ್ರ-ಸ್ಥಳನಾಮ ಸಂಘಗಳ ಜಂಟಿ ಅಧಿವೇಶನ: ದೇವಾಲಯಗಳ ಇತಿಹಾಸ, ಶಾಸನಗಳ ಪ್ರಾಚೀನತೆ ಬಿಂಬಿಸಿದ ಗೋಷ್ಠಿ

February 29, 2020
7:54 PM

ಧರ್ಮಸ್ಥಳ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಧರ್ಮಸ್ಥಳದ ವಸಂತ ಮಹಲ್ ಸಭಾಭವನದಲ್ಲಿಆಯೋಜಿತವಾದ ಶಾಸನ ಶಾಸ್ತ್ರ ಸಂಘದ 45ನೇ ಮತ್ತು ಸ್ಥಳ ನಾಮ ಸಂಘದ 39ನೇ ಜಂಟಿ ಅಧಿವೇಶನದಲ್ಲಿ ದೇವಾಲಯಗಳ ಇತಿಹಾಸ ಮತ್ತು ಶಾಸನಗಳ ಪ್ರಾಚೀನ ವೈಶಿಷ್ಟ್ಯತೆ ಕುರಿತ ವಿಸ್ತೃತ ವಿಚಾರಗಳು ಪ್ರಸ್ತುತಪಡಿಸಲ್ಪಟ್ಟವು.

Advertisement
Advertisement

ನಾಗರಿಕ ಸಂಹಿತೆ ಮತ್ತು ಪೋರ್ಚುಗಿಸ್ ಶಾಸನಗಳು, ನಾಗಾವ್‍ಶಾಸನದ ಸಾಮಾಜಿಕ ಸಂಕೇತ, ಆಂಧ್ರದ ಇತ್ತೀಚಿನ ಬ್ರಾಹ್ಮೀ ಶಾಸನಗಳು,ಎರಡನೇ ಹೊಯ್ಸಳ ವೀರಬಲ್ಲಾಳ, ಸೂರ್ಯದೇವ ಮತ್ತು ಅವನ ದೇವಾಲಯದಇತಿಹಾಸ, ಹರಪ್ಪ ಶಾಸನ ಎಂಬ ವಿಷಯಗಳ ಮೇಲೆ ಪ್ರಬಂಧ ಮಂಡನೆ ನಡೆಯಿತು.  ಪೋರ್ಚುಗಿಸ್ ಶಾಸನಗಳಲ್ಲಿ ಮಹಿಳೆಯರಿಗೆ ನೀಡಿರುವ ಹಕ್ಕುಗಳ ಬಗ್ಗೆ ಉಲ್ಲೇಖವಿರುವುದನ್ನು ಡಾ. ಸ್ವಪ್ನ ಸಮೇಲಿ ಮಂಡಿಸಿದರು. ಪೋರ್ಚುಗೀಸ್‍ ಕಾಲದಲ್ಲಿ ಹೆಣ್ಣುಮಕ್ಕಳಿಗೆ ಅವರ ಗಂಡನ ಹಾಗೂ ತಂದೆಯ ಆಸ್ತಿಯಲ್ಲಿ ಹಕ್ಕಿತ್ತು. ಆದರೆ ಭಾರತದಲ್ಲಿ ಆ ಅವಕಾಶವಿರಲಿಲ್ಲ. ಪೋರ್ಚುಗೀಸರು ಭಾರತಕ್ಕೆ ಬಂದ ಮೇಲೆ ಮೊದಲು ಗೋವಾದಲ್ಲಿ ಕ್ರಿಶ್ಚಿಯನ್ ಹೆಣ್ಣುಮಕ್ಕಳಿಗೆ ಈ ಹಕ್ಕನ್ನು ನೀಡಿದರು. ಇತ್ತೀಚೆಗೆ ಭಾರತದ ಎಲ್ಲಾ ಹೆಣ್ಣುಮಕ್ಕಳಿಗೆ ಈ ಹಕ್ಕು ದೊರೆತಿದೆ ಎಂದರು.

Advertisement

ಡಾ. ಅನುರಾಧಾ ಕೆ ರಾನಡೆ, ಮಹಾರಾಷ್ಟ್ರದ ನಾಗಾವ್‍ನಲ್ಲಿರುವ ಶಾಸನದ ಸಾಮಾಜಿಕ ಸಂಕೇತಗಳ ಬಗ್ಗೆ ತಿಳಿಸಿದರು. 13ನೇ ಶತಮಾನದಲ್ಲಿ ರಚಿಸಲ್ಪಟ್ಟ ಈ ಶಾಸನ ಸಂಸ್ಕೃತ ಲಿಪಿಯಲ್ಲಿದ್ದು ಮರಾಠಿ ಭಾಷೆಯಲ್ಲಿದೆ. ಬಿ. ಕೆ. ರಾಜವಾಡೆ ಎಂಬುವವರು ಇದನ್ನು ಮೊದಲ ಬಾರಿಗೆ ಶೋಧಿಸಿದರು ಎಂದರು. ಇತ್ತೀಚೆಗೆ ಆಂಧ್ರದಲ್ಲಿ ದೊರೆತ ಬ್ರಾಹ್ಮೀ ಶಾಸನಗಳ ಕುರಿತಾಗಿ ಡಾ. ಕೆ. ಮಣಿರತ್ನಂ ವಿಷಯ ಮಂಡಿಸಿದರು. ಶಾತವಾಹನ ರಾಜಕುಮಾರ ಹಕುಸಿರಿಯ ಮುಕ್ಕಾರೋಪೆಟ್ ಶಾಸನ, ಫಣಗಿರಿಯ ಅಯ್ಕಾ ಪಿಲ್ಲರ್ ಹಾಗೂ ಬ್ರಾಹ್ಮೀ ಶಾಸನ, ಶಾತವಾಹನರಾಜ ವಿಜಯನಚೆಬ್ರೋಲು ಶಾಸನದ ಕುರಿತಾಗಿ ಚಿತ್ರಸಹಿತವಾಗಿ ವಿವರಿಸಿದರು.

ತಮಿಳು ಶಾಸನಗಳಲ್ಲಿರುವ ಸೂರ್ಯದೇವ ಹಾಗೂ ಅವನ ದೇವಾಲಯಗಳ ಇತಿಹಾಸದ ಕುರಿತಾಗಿ ಡಾ. ಕೆ. ಪನ್ನೀರ್ ಸೆಲ್ವಂ ವಿಷಯ ಮಂಡಿಸಿದರು. ಅಷ್ಟಮೂರ್ತಿಗಳಲ್ಲಿ ಸೂರ್ಯನು ಪ್ರಮುಖನಾದವನು. ಆಕಾಶ, ವಾಯು, ಬೆಂಕಿ, ಚಂದ್ರ, ನೀರು, ಭೂಮಿ ಹಾಗೂ ಆತ್ಮ ಇನ್ನುಳಿದವು. ಸೂರ್ಯನಿಗೆ ತಮಿಳುನಾಡಿನಲ್ಲಿ ಪ್ರಮುಖ ಸ್ಥಾನವಿದೆ. ಸೂರ್ಯನಿಗಾಗಿ ಪ್ರತ್ಯೇಕ ದೇವಾಲಯ ಅಥವಾ ಶಿವನ ದೇವಾಲಯಗಳಲ್ಲಿ ಅವನಿಗೆ ಸ್ಥಾನವಿದೆ ಎಂದರು.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |
May 6, 2024
11:07 AM
by: ಸಾಯಿಶೇಖರ್ ಕರಿಕಳ
ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |
May 5, 2024
3:21 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |
May 5, 2024
2:10 PM
by: ಸಾಯಿಶೇಖರ್ ಕರಿಕಳ
Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ
May 4, 2024
12:30 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror