ನ.18ರಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಕುರಿತ ಎರಡು ಕೃತಿಗಳ ಬಿಡುಗಡೆ

November 14, 2019
7:46 PM

ಮಂಗಳೂರು: ಪ್ರಸಾರ ಭಾರತಿ ಮಾಜಿ ಅಧ್ಯಕ್ಷೆ, ಹಿಂದೂಸ್ತಾನ್ ಪತ್ರಿಕೆಯ ಸಂಪಾದಕಿಯಾಗಿದ್ದ ಮೃಣಾಲ್ ಪಾಂಡೆ ಅವರ ಕುರಿತಾದ ಎರಡು ಕೃತಿಗಳ ಬಿಡುಗಡೆ ಸಮಾರಂಭ ನ.18ರಂದು ಸಂಜೆ 4ಕ್ಕೆ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

Advertisement

ಹಿಂದಿ ಶಿಕ್ಷಕಿ ಡಾ.ಯಶೋಧಾ ಕರನಿಂಗ ಅವರು ಬರೆದಿರುವ ಕೃತಿಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಬಿಡುಗಡೆ ಮಾಡಿ, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ (ಎನ್ ಎಸ್ ಸಿಡಿಎಫ್) ವತಿಯಿಂದ ನಡೆಯುವ ಮೂರು ದಿನಗಳ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

“ಮೃಣಾಲ್ ಪಾಂಡೆ ಕೇ ಕಥಾ ಮೇ ನಾರಿ ಚೇತನ” ಮತ್ತು ಅವರ ದೇವಿ ಕಾದಂಬರಿಯ ವಿಮರ್ಶಾ ಕೃತಿ “ಮೃಣಾಲ್ ಪಾಂಡೆ ಉಪನ್ಯಾಸ್ ಕ ನಯಾ ಸಂದರ್ಭ್” ಎಂಬ ಎರಡು ಹಿಂದಿ ಕೃತಿಗಳು ಈ ಸಂದರ್ಭದಲ್ಲಿ ಬಿಡುಗಡೆ ಆಗಲಿವೆ. ಪ್ರಸಾರ ಭಾರತಿಯ ಅಧ್ಯಕ್ಷೆಯಾಗಿದ್ದ ಮೃಣಾಲ್ ಪಾಂಡೆ ಅವರು ಕಳೆದ ಶತಮಾನದ ಮಹಿಳಾ ಪತ್ರಕರ್ತರಲ್ಲಿ ಪ್ರಮುಖರಾಗಿದ್ದಾರೆ.

ಕೃತಿಗಳ ಲೇಖಕಿ ಉಡುಪಿ ಮರವಂತೆ ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿದ್ದು, ಇದೀಗ ಶಿರಸಿಯ ಸರಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಇದೇ ಸಂದರ್ಭದಲ್ಲಿ ಪತ್ರಕರ್ತ ಎಂ.ಎಂ.ಎ. ಶರೀಫ್ ಹಾಗೂ ರಂಗ ಕಲಾವಿದ ಇಂದುಶೇಖರ್ ಅವರನ್ನು ಸನ್ಮಾನಿಸಲಾಗುವುದು. ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ಗಾಂಧಿ ಅಧ್ಯಕ್ಷತೆ ವಹಿಸಲಿದ್ದು, ನ್ಯಾಯವಾದಿ ಗಂಗಾಧರ ಉಳ್ಳಾಲ, ಲೇಖಕಿ ಯಶೋಧ ಕರನಿಂದ, ಸಾಮಾಜಿಕ ಕಾರ್ಯಕರ್ತೆ ಭಾರೀರತಿ ಬಿ.ಕೆ. ಕೊಡಗು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ದಿನಕರ ಡಿ.ಬಂಗೇರ, ಮಲ್ಲಿಕಾ ಅಜಿತ್ ಶೆಟ್ಟಿ ಭಾಗವಹಿಸುವರು.

ನ.18ರಿಂದ 20ರ ತನಕ ಪ್ರತಿ ದಿನ ಸಂಜೆ ಪುರಭವನದಲ್ಲಿ ಸಂಸ್ಕೃತಿ ಸಂಭ್ರಮ ಅಂಗವಾಗಿ ಯಕ್ಷಗಾನ, ಜಾನಪದ ನೃತ್ಯ ಸಹಿತ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

2047 ರ ವೇಳೆಗೆ ಕೇಂದ್ರ ಸರ್ಕಾರದಿಂದ 32 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
July 6, 2025
10:40 AM
by: ದ ರೂರಲ್ ಮಿರರ್.ಕಾಂ
ತುಂಗಾ, ಭದ್ರಾ ಜಲಾಶಯಗಳಿಂದ ಯಾವುದೇ ಕ್ಷಣದಲ್ಲಿ ನೀರು ಬಿಡುಗಡೆ ಸಾಧ್ಯತೆ | ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ
July 6, 2025
10:34 AM
by: ದ ರೂರಲ್ ಮಿರರ್.ಕಾಂ
ವೇಗವಾಗಿ ಬೆಳೆಯುವ ಮರ ಹವಾಮಾನ ವೈಪರೀತ್ಯಕ್ಕೆ ಪರಿಹಾರ | ಕೃಷಿ ಅರಣ್ಯೀಕರಣಕ್ಕೆ ಬೆಂಬಲ – ಕೃಷಿ ಆದಾಯ ಹೆಚ್ಚಿಸಲೂ ಸಲಹೆ |
July 6, 2025
10:20 AM
by: ದ ರೂರಲ್ ಮಿರರ್.ಕಾಂ
ಜು.10 ರಿಂದ ರಾಘವೇಶ್ವರ ಶ್ರೀಗಳ ಸ್ವಭಾಷಾ ಚಾತುರ್ಮಾಸ್ಯ ಆರಂಭ
July 5, 2025
10:24 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group