ಸವಣೂರು : ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ, ಸವಣೂರು ಗ್ರಾಮ ಪಂಚಾಯತ್, ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ ಪಾಲ್ತಾಡಿ, ವಿವೇಕಾನಂದ ಯುವಕ ಮಂಡಲ ಮಂಜುನಾಥನಗರ, ಶ್ರೀ ಗೌರಿ ಯುವತಿ ಮಂಡಲ ಮಂಜುನಾಥನಗರ ಇವುಗಳ ಜಂಟಿ ಆಶ್ರಯದಲ್ಲಿ ನವೋದಯ ಸ್ವಸಹಾಯ ಸಂಘಗಳ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಆರೋಗ್ಯ ಮಾಹಿತಿ ಕಾರ್ಯಾಗಾರ ನ.25ರಂದು ಮದ್ಯಾಹ್ನ 2.30ರಿಂದ ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಪಕ್ ಕುಮಾರ್ ಮಾಹಿತಿ ನೀಡುವರು. ನವೋದಯ ಸ್ವಸಹಾಯ ಸಂಘಗಳ ಪ್ರೇರಕಿ ಕಲ್ಪವಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel