ಸುಳ್ಯ: ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಎ.ಎಂ.ಶ್ರೀಧರ ಅವರಿಗೆ ನ.ಪಂ.ಸದಸ್ಯರು ಮತ್ತು ಸಿಬ್ಬಂದಿಗಳ ಪರವಾಗಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಯಿತು.
ನಗರ ಪಂಚಾಯತ್ ಆಡಳಿತಾಧಿಕಾರಿ ತಹಶೀಲ್ದಾರ್ ಎನ್.ಎ.ಕುಂಞ ಅಹಮ್ಮದ್ ಮುಖ್ಯಾಧಿಕಾರಿ ಶ್ರೀಧರ ಅವರನ್ನು ಸನ್ಮಾನಿಸಿದರು.
ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಎ.ಶಶಿಕಲಾ, ಸರೋಜಿನಿ, ರಿಯಾಝ್ ಕಟ್ಟೆಕ್ಕಾರ್, ಶರೀಫ್ ಕಂಠಿ, ನಾರಾಯಣ.ಪಿ.ಆರ್., ಧೀರಾ ಕ್ರಾಸ್ತಾ, ಶಿಲ್ಪಾ, ಪೂಜಿತ.ಕೆ.ಯು, ಪ್ರವಿತಾ, ಜಯಂತಿ, ಕಿಶೋರಿ ಶೆಟ್ಟಿ, ಶೀಲಾ ಅರುಣ್, ನಗರ ಪಂಚಾಯತ್ ಇಂಜಿನಿಯರ್ ಶಿವಕುಮಾರ್, ಪತ್ರಕರ್ತರ ಸಂಘದ ಅಧ್ಯಕ್ಷ ತೇಜೇಶ್ವರ ಕುಂದಲ್ಪಾಡಿ, ವಿನೋದ್ ಲಸ್ರಾದೋ ಮತ್ತಿತರರು ಉಪಸ್ಥಿತರಿದ್ದರು.
ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಎಂ.ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು. ವಿರಾಜಪೇಟೆ ಪಟ್ಟಣ ಪಂಚಾಯತ್ ನಿಂ ದ ಚುನಾವಣೆಯ ಹಿನ್ನಲೆಯಲ್ಲಿ ಸುಳ್ಯ ನಗರ ಪಂಚಾಯತ್ ಗೆ ಅವರು ವರ್ಗಾವಣೆಯಾಗಿ ಬಂದಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel