ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯವಿದೆ : ಕಟೀಲ್

April 27, 2023
10:21 AM

ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯಗಳಿದ್ದಾವೆ. ರಾಹುಲ್ ಗಾಂಧಿ ಯಾವ ಹೋರಾಟದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಕೊಡುಗೆ ಶೂನ್ಯ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಖಾರವಾಗಿ ಮಾತನಾಡಿದರು. ನಮಗೆ ರಾಹುಲ್ ಗಾಂಧಿ ರಕ್ತದ ಬಗ್ಗೆ ಸಂಶಯಗಳಿವೆ. ರಾಹುಲ್ ಗಾಂಧಿ ಯಾವ ಹೋರಾಟದವರು? ಗಾಂಧಿ ಅಂತ ಹೇಳುವಂಥದ್ದು ರಾಹುಲ್ ಗಾಂಧಿಗೆ ಹೇಗೆ ಬಂತು ಎಂಬುದನ್ನು ವಿವರಣೆ ನೀಡಲಿ. 224 ಕ್ಷೇತ್ರಕ್ಕೂ ರಾಹುಲ್ ಗಾಂಧಿ ಪ್ರವಾಸ ಮಾಡಬೇಕು. ಇಡೀ ದೇಶದಲ್ಲಿ ಎಲ್ಲೆಲ್ಲಿ ರಾಹುಲ್ ಗಾಂಧಿ ಪ್ರವಾಸ ಮಾಡಿದ್ದಾರೋ, ಅಲ್ಲಲ್ಲಿ ಕಾಂಗ್ರೆಸ್ ಸೋತಿದೆ ಎಂದು ಕುಟುಕಿದರು.

ಶೆಟ್ಟರ್‌ಗೆ ಬಿಜೆಪಿ ಗೌರವ, ಅಧಿಕಾರ ಎಲ್ಲವನ್ನೂ ಕೊಟ್ಟಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾರೆ. ಅವರ ವಿರುದ್ಧ ಬಿಜೆಪಿ ಗೆಲ್ಲಲೇಬೇಕು. ಕೌರವರು ಮತ್ತು ಪಾಂಡವರ ಯುದ್ಧ ಮಾಡಲೇಬೇಕು. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಅನಿವಾರ್ಯ ಎಂದರು.

ಲಿಂಗಾಯತ ಸಿಎಂ ವಿಚಾರವಾಗಿ ಮಾತನಾಡಿ, ಈಗಾಗಲೇ ಬಿಜೆಪಿಯೇ 3 ಬಾರಿ ಲಿಂಗಾಯತ ಮುಖ್ಯಮಂತ್ರಿಗಳನ್ನು ಮಾಡಿದೆ. ಮುಂದೆಯೂ ಲಿಂಗಾಯತರನ್ನೇ ಸಿಎಂ ಮಾಡೋದು. ಇದನ್ನೇ ಸಿದ್ರಾಮಣ್ಣ ಅಥವಾ ಡಿಕೆಶಿ ಶಕ್ತಿ, ತಾಕತ್ತು ಇದ್ರೆ ಹೇಳಲಿ ಅಂತ ಸವಾಲು ಹಾಕಿದರು.

Advertisement

ಗದಗ ಮತಕ್ಷೇತ್ರದಲ್ಲೂ ಗುಂಡಾಗಿರಿ ರಾಜಕಾರಣ ನೋಡಿದ್ದೇವೆ. ನಾಮಪತ್ರ ಸಲ್ಲಿಕೆ ವೇಳೆ ನಮ್ಮ ಅಭ್ಯರ್ಥಿ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಗುಂಡಾಗಿರಿಯಿಂದ ಈ ಕ್ಷೇತ್ರ ಗೆಲ್ಲಬಹುದೆಂದು ಪ್ರಯತ್ನ ಮಾಡಿದ್ದಾರೆ. ಆದ್ರೆ ನಮ್ಮ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಈ ಬಾರಿ ಇಲ್ಲಿ ಗೆಲ್ತಾರೆ ಎಂದರು.

ಸಮಾಜವನ್ನ ಒಡೆಯುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಅಧಿಕಾರ ಇದ್ದಾಗ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದೆ. ಅಧಿಕಾರ ಬಿಟ್ಟಾಗ ಅವರ ಬಗ್ಗೆ ಕೆಟ್ಟದಾಗಿ ಸಿದ್ರಾಮಣ್ಣ ಮಾತಾಡ್ತಾರೆ. ಇದೆಲ್ಲವನ್ನ ಜನ ಮನಗಂಡು ಕಾಂಗ್ರೆಸ್ ತಿರಸ್ಕರಿಸ್ತಾರೆ ಎಂದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆ | ಹವಾಮಾನ ಇಲಾಖೆ ಮುನ್ಸೂಚನೆ
September 18, 2025
9:25 PM
by: The Rural Mirror ಸುದ್ದಿಜಾಲ
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ
September 18, 2025
9:11 PM
by: The Rural Mirror ಸುದ್ದಿಜಾಲ
ಮಳೆ ಹಾನಿ ಬೆಳೆನಷ್ಟ ಪರಿಹಾರ ಹೆಚ್ಚಿಸುವವಂತೆ ರೈತರ ನಿಯೋಗದಿಂದ ಮುಖ್ಯಮಂತ್ರಿಗಳಿಗೆ ಒತ್ತಾಯ
September 18, 2025
9:06 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 18-09-2025 | ಮುಂಗಾರು ದುರ್ಬಲ – ಅಲ್ಲಲ್ಲಿ ಗುಡುಗು ಮಳೆ | ಸೆ.19 ರಿಂದ ಮಳೆಯ ಪ್ರಮಾಣ ಕಡಿಮೆಯಾಗುವ ಸೂಚನೆ
September 18, 2025
1:38 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group