ಉಪ್ಪಿನಂಗಡಿ: ನರೇಂದ್ರ ಮೋದಿ ಅವರು ಇಂದು ಸಂಜೆ ದೇಶದ ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಯಲ್ಲಿ 15 ಅಟೋ ರಿಕ್ಷಾ ಚಾಲಕರಿಂದ ವಿನೂತನ ಸೇವೆ ನಡೆಯುತ್ತಿದೆ. 5 ಕಿ ಮೀ ವ್ಯಾಪ್ತಿಯೊಳಗಿನ ಪ್ರಯಾಣಿಕರಿಗೆ ದಿನವಿಡೀ ಉಚಿತ ಪ್ರಯಾಣ ಸೇವೆ. ದೇಶದ ಭವ್ಯ ಭವಿಷ್ಯದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಿದೆ ಎಂಬುವುದಕ್ಕೆ ಸಾಕ್ಷಿಯಾಗಿ ಈ ರೀತಿಯ ಉಚಿತ ಸೇವೆ ನೀಡುತ್ತಿದ್ದಾರೆ.
ಅದೇ ರೀತಿ ಇಂದು ಸಂಜೆ ಗಂಟೆ 5 ರಿಂದ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಭಾರತದ ಪ್ರಧಾನ ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಸಮಾರಂಭದ ನೇರಪ್ರಸಾರವನ್ನು LED ಪರದೆಯ ಮೂಲಕ ವೀಕ್ಷಿಸುವ ವ್ಯವಸ್ಥೆಯನ್ನು ಯುವಬ್ರಿಗೆಡ್ ಸಹಿತ ವಿವಿಧ ಸಂಘಟನೆಗಳ ಸಹಕಾರದಿಂದ ನಡೆಯುತ್ತಿದೆ.
ವಿಶೇಷವಾಗಿ ಲಾಡು ಮತ್ತು ಚಹಾದ ವ್ಯವಸ್ಥೆ ಇರುತ್ತದೆ. ಅಲ್ಲದೆ ಆಕರ್ಷಕ “ಸಿಡಿಮದ್ದು” ಪ್ರದರ್ಶನ ಇರಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel