ನಿಂತಿಕಲ್ಲಿನಲ್ಲಿ ಇರೇಸರ್ – ಕ್ಯಾಂಪಸ್ ಮೀಟ್

May 19, 2019
1:57 PM

ನಿಂತಿಕಲ್ಲು: ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧೀನದಲ್ಲಿ ಕ್ಯಾಂಪಸ್ ವಿಂಗ್ ವತಿಯಿಂದ ಇರೇಸರ್ – ಕ್ಯಾಂಪಸ್ ಮೀಟ್  ಶನಿವಾರ ನಿಂತಿಕಲ್ಲಿನಲ್ಲಿ ನಡೆಯಿತು.

Advertisement
Advertisement

ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಹನೀಫಿ ಉದ್ಘಾಟಿಸಿದರು. ನಂತರ ಟಿ.ಎಂ ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಮೊದಲನೇ  ಅವಧಿಯಲ್ಲಿ  ಫಾತಿಹ ಎಂಬ ಸೂರತ್ ಅಲ್ – ಫಾತಿಹ ಪಾರಾಯಣ ಮಾಡುವುದರೊಂದಿಗೆ ಅದರ ಮಹತ್ವ ಮತ್ತು ಅರ್ಥವನ್ನು ಬಹಳ ಸವಿಸ್ತಾರವಾಗಿ ತಿಳಿಸಿದರು.

ಎರಡನೇ ಅವಧಿಯಲ್ಲಿ, ಡ್ರೀಮ್ಸ್ – ಜೀವನದ ಗುರಿ ಮತ್ತು ಉದ್ದೇಶಗಳ ಕುರಿತ ತರಬೇತಿಯನ್ನು ನಿಂತಿಕಲ್ಲು ಕ್ಯಾಂಪಸ್ ಕಾರ್ಯದರ್ಶಿ ರಹ್ಮಾನ್ ಎಣ್ಮೂರು ಅವರು ನಡೆಸಿದರು.

ನಂತರದ ಅವಧಿಯಲ್ಲಿ ಕ್ವಿಜ್ ರಂಝಾನ್ ಹಾಗೂ ಖುರ್’ಆನ್ ಕುರಿತ ರಸಪ್ರಶ್ನೆ ಸ್ಪರ್ಧೆಯನ್ನು ಸುಳ್ಯ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಖಲೀಲ್ ಝುಹ್ರಿ ನೆಕ್ಕಿಲ ಇವರು ನಡೆಸಿಕೊಟ್ಟರು.

ಉತ್ತಮ ತರಬೇತಿಗಳ ಮೂಲಕ ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಮನಸ್ಸಲ್ಲಿ ಹೊಸ ಚೈತನ್ಯವನ್ನು ಮೂಡಿಸಿ, ಇಪ್ತಾರ್ ಕೂಟದ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಲಾಯಿತು.
ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ನಿಂತಿಕಲ್ಲು ಸೆಕ್ಟರ್ ಕಾರ್ಯದರ್ಶಿ ರಿಯಾಝ್ ನೆಕ್ಕಿಲ ಸ್ವಾಗತಿಸಿ ರೈಟ್ ಟೀಂ ಕಾರ್ಯಕರ್ತ ಶಿಹಾಬ್ ನೆಕ್ಕಿಲ ವಂದಿಸಿದರು.

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಮಾಡಿದ ಯುವಕ
May 3, 2025
6:28 AM
by: The Rural Mirror ಸುದ್ದಿಜಾಲ
ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರ ಉತ್ಪನ್ನಗಳ ಪ್ರದರ್ಶನ ಮಾರಾಟ ಮೇಳ | ಜಿಲ್ಲೆಯ ಅತ್ಯುತ್ತಮ ಕೃಷಿ ಸಖಿ ಪ್ರಶಸ್ತಿ ಸಂಪಾಜೆ ಮೋಹಿನಿ ವಿಶ್ವನಾಥ್ ಅವರಿಗೆ
April 24, 2025
9:47 PM
by: ದ ರೂರಲ್ ಮಿರರ್.ಕಾಂ
ಪಟ್ಟೆ ವಿದ್ಯಾ ಸಂಸ್ಥೆಗಳು ಬಡಗನ್ನೂರು ಇನ್ನು ದ್ವಾರಕಾ ಪ್ರತಿಷ್ಠಾನ ಪುತ್ತೂರಿಗೆ ಸೇರ್ಪಡೆ
April 12, 2025
11:50 AM
by: The Rural Mirror ಸುದ್ದಿಜಾಲ
ಪಿಯುಸಿ ಫಲಿತಾಂಶ | ಶ್ರೇಯನ್‌ ಕಾವಿನಮೂಲೆ | ಸುಳ್ಯ ತಾಲೂಕು ಟಾಪರ್‌ | ರಾಜ್ಯಮಟ್ಟದಲ್ಲಿ 8 ನೇ ಸ್ಥಾನ |
April 9, 2025
2:58 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group