ಮುಂಬೈ: ನಿಸರ್ಗ ಚಂಡಮಾರುತವು ಆಲಿಬಾಗ್ ಮೂಲಕ ಮಹಾರಾಷ್ಟ್ರ ಪ್ರವೇಶ ಮಾಡಿದೆ. ಹೀಗಾಗಿ ಮಹಾರಾಷ್ಟ್ರದ ವಿವಿದೆಡೆ ಭಾರೀ ಮಳೆಯಾಗುತ್ತಿದ್ದು ಮುಂದಿನ 3 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ ನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಎರಡು ರಾಜ್ಯಗಳಲ್ಲಿ ಸುಮಾರು 43 ರಾಷ್ಟ್ರೀಯ ವಿಪತ್ತು (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ. ಅದರಲ್ಲಿ 21 ಮಹಾರಾಷ್ಟ್ರ ಮತ್ತು 16 ಗುಜರಾತ್‌ನಲ್ಲಿವೆ. ಚಂಡಮಾರುತದ ಸ್ಥಳದಿಂದ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
Advertisement
ಮಧ್ಯಾಹ್ನ ಸುಮಾರು 12.40 ರ ಹೊತ್ತಿಗೆ ಚಂಡಮಾರುತವು ಮಹಾರಾಷ್ಟ್ರ ಪ್ರವೇಶ ಮಾಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ಗಾಳಿಯ ವೇಗವು 100-110 ಕಿ ಮೀ ವೇಗದಲ್ಲಿತ್ತು. ಮುಂದಿನ ಎರಡು ಗಂಟೆಗಳಲ್ಲಿ ರಾಯಗಡ್, ಮುಂಬೈ ಭಾರಿ ಮಳೆಯಾಗುವ ನಿರೀಕ್ಷೆಯಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement