ಸುಳ್ಯ: ಸುಳ್ಯ ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ತನ್ನ ವಾರ್ಡಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ “ನಮ್ಮೂರ ಪ್ರತಿಭೆ’ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಪ್ರಥಮ ಹಂತವಾಗಿ ಬೂಡು ವಾರ್ಡಿನ ಪ್ರತಿಭೆ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ 1902ನೇ ಸ್ಥಾನ ಪಡೆದ ಅಮಿಷಾ.ಬಿ ಸೋಮಯಾಗಿಯವರನ್ನು ಸನ್ಮಾನಿಸಲಾಯಿತು. ಸುಳ್ಯ ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ಅಮಿಷಾ. ಬಿ.ಸೋಮಯಾಗಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾಝ್ ಕಟ್ಟೆಕ್ಕಾರ್, ಇನ್ನರ್ವ್ಹೀಲ್ ಕ್ಲಬ್ ಐಎಸ್ಒ ಲತಾ.ಎಂ ರೈ, ಮಲೆನಾಡು ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸಿದ್ದೀಕ್ ಕೊಕ್ಕೋ, ಶರೀಫ್ ಜಟ್ಟಿಪಳ್ಳ, ಸುನೀಲ್ ಕೇರ್ಪಳ, ಶಿಹಾಬ್ ಬೂಡು, ಶಹೀದ್ ಪಾರೆ ಮತ್ತಿತರರು ಉಪಸ್ಥಿತರಿದ್ದರು. ರಫೀಕ್ ಚೆಂಗಳ ಕಾರ್ಯಕ್ರಮ ನಿರೂಪಿಸಿದರು.
ಅಮಿಷಾ ಬಿ.ಸೋಮಯಾಗಿ ಅಶೋಕ್ ಮೆಡಿಕಲ್ಸ್ನ ಬಾಲಕೃಷ್ಣ ಸೋಮಯಾಗಿ ಮತ್ತು ಸೌಮ್ಯ ದಂಪತಿಯ ಪುತ್ರಿ .