ನೀರ ನೆಮ್ಮದಿಯತ್ತ ಪಡ್ರೆ – ಇನ್ನೊಂದು ವಿನೂತನ ಜಾಗೃತಿ ಕಾರ್ಯಕ್ರಮ :” ಚಿಣ್ಣರೇ, ಕಟ್ಟ ನೋಡೋಣು ಬನ್ನಿ…”

November 24, 2019
9:12 AM

ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮ ನೀರ ನೆಮ್ಮದಿಯತ್ತ ಎಂಬ ಯೋಜನೆಯನ್ನು  ಕಳೆದ ವರ್ಷ ಹಮ್ಮಿಕೊಂಡಿದೆ. ಪಡ್ರೆ ಗ್ರಾಮದಲ್ಲಿ  ಜಲಸಂರಕ್ಷಣೆ ಹಾಗೂ ಜಲ ಅಭಿಯಾನ ಕಳೆದ ವರ್ಷ ಹಮ್ಮಿಕೊಂಡಿತ್ತು. ಇದಕ್ಕಾಗಿ ಪಡ್ರೆಯ ಹೊಳೆಯಲ್ಲಿ ಹೊಳೆಯ ಆಸುಪಾಸಿನ ಜನರೆಲ್ಲಾ ಹೊಳೆ ನಡಿಗೆ ಮೂಲಕ ಅಧ್ಯಯನ ಮಾಡಿ ಎಲ್ಲಿ , ಹೇಗೆ ಕಟ್ಟ ಕಟ್ಟಬೇಕು, ಜಲಸಂರಕ್ಷಣೆ ಮಾಡಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಈ ವರ್ಷ ಅದರ ಅನುಷ್ಠಾನ. ಈ ಅನುಷ್ಠಾನ ಕಾರ್ಯಕ್ರಮವೂ ಸಮಾಜದ ಇತರ ಕಡೆಗಳಲ್ಲಿ  ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಇನ್ನೊಂದು ವಿನೂತನ ಜಾಗೃತಿ ಅಭಿಯಾನ “ಚಿಣ್ಣರೇ, ಕಟ್ಟ ನೋಡೋಣು ಬನ್ನಿ…”

Advertisement
Advertisement

ಮುಂದಿನ ಒಂದು ತಿಂಗಳು ತೋಡುಗಳಿಗೆ ಕಟ್ಟ ಕಟ್ಟುವ ಸಮಯ. ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮ ಈ ವರ್ಷ ಈ ಋತುವಿನಲ್ಲಿ ಹೊಸದೊಂದು ಕಾರ್ಯಕ್ರಮ ಹಾಕಿಕೊಂಡಿದೆ. ಅದುವೇ ಎಳೆ ಪೀಳಿಗೆಗೆ ಕಟ್ಟದ ಬಗ್ಗೆ ಕಂಡರಿವು ಮೂಡಿಸುವ ಯೋಜನೆ.

ಡಿ.1 ರಿಂದ  ಪಡ್ರೆಯಲ್ಲಿ  ’ನೀರ ನೆಮ್ಮದಿಯತ್ತ ಪಡ್ರೆ’ ( ನೀನೆಪ) ತಂಡ ’ಕಟ್ಟ ಕಟ್ಟುವ ಹಬ್ಬ’ ಆಚರಿಸಲು ತೊಡಗುತ್ತದೆ. ಡಿಸೆಂಬರ್ ಕೊನೆಯ ವರೆಗೆ ಇಲ್ಲಿ ಸುಮಾರು ಎರಡು- ಮೂರು ಡಜನ್ ಕಟ್ಟಗಳ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಊರ – ಪರವೂರವರಗೆ ಮತ್ತು ಸುತ್ತುಮುತ್ತಲಿನ ಶಾಲೆಯ ಎಳೆಯರಿಗೆ ಈ ತಂತ್ರಜ್ಞಾನದ ತಿಳಿವಳಿಕೆ ಹಂಚುವುದನ್ನೇ ಈ ತಂಡ ಹಬ್ಬದ ಉದ್ದೇಶವಾಗಿಟ್ಟುಕೊಂಡಿದೆ.

Advertisement

ನೆರೆಯ ಕೇರಳ – ಕರ್ನಾಟಕದ ಶಾಲಾ ಕಾಲೇಜಿನ ಅಧ್ಯಾಪಕರು ನೀನೆಪದ ’ಕಟ್ಟ ದರ್ಶನ’ದ ಸಂಯೋಜಕರನ್ನು ಸಂಪರ್ಕಿಸಿ ದಿನ ಗೊತ್ತು ಮಾಡಿಕೊಂಡು ಪಡ್ರೆಗೆ ಭೇಟಿ ನೀಡಬಹುದು. ಕಟ್ಟ ನಿರ್ಮಾಣದ ರೀತಿ, ಅದರ ಮಹತ್ವಗಳ ಬಗ್ಗೆ ಅಲ್ಲಲ್ಲಿನ ಕೃಷಿಕ ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಡುತ್ತಾರೆ.

ಈ ಅವಕಾಶವನ್ನು ಸುತ್ತಲಿನ ಶಾಲಾ-ಕಾಲೇಜುಗಳ ಪರಿಸರ ಕ್ಲಬ್ಬು, ಎನ್ನೆಸ್ಸೆಸ್ ಇತ್ಯಾದಿ ಘಟಕಗಳ ಪ್ರತಿನಿಧಿಗಳು, ಕೃಷಿಕರ ಗುಂಪುಗಳು ಬಳಸಿಕೊಳ್ಳಬಹುದು. ಆಸಕ್ತರು ’ಕಟ್ಟ ದರ್ಶನ’ದ ಸಂಯೋಜಕ ಶ್ರೀಹರಿ ಆರ್  ಅವರನ್ನು (94950 66261) ಸಂಪರ್ಕಿಸಬಹುದು.

 

 

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

58ನೇ ಜ್ಞಾನಪೀಠ ಪ್ರಶಸ್ತಿ  ಪ್ರದಾನ | ಜಗದ್ಗುರು ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ
May 17, 2025
10:22 PM
by: The Rural Mirror ಸುದ್ದಿಜಾಲ
ವಾಯುಭಾರ ಕುಸಿತ | ಕೇರಳದಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ | ಆರು ಜಿಲ್ಲೆಗಳಲ್ಲಿ ಎಲ್ಲೋ ಎಲರ್ಟ್‌ | ರಾಜ್ಯದಲ್ಲೂ ಮಳೆ ಸಾಧ್ಯತೆ |
May 17, 2025
8:27 PM
by: ದ ರೂರಲ್ ಮಿರರ್.ಕಾಂ
ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ
May 16, 2025
9:59 PM
by: The Rural Mirror ಸುದ್ದಿಜಾಲ
ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ
May 16, 2025
9:51 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group