ನೆರೆ ಸಂತ್ರಸ್ತರಿಗೆ ಧರ್ಮಸ್ಥಳದಿಂದ ನೆರವು

August 12, 2019
10:30 AM

ಧರ್ಮಸ್ಥಳ : ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳ ನೆರೆ ಸಂತ್ರಸ್ತರಿಗೆ ಧರ್ಮಸ್ಥಳದ ವತಿಯಿಂದ ಆರು ಸಾವಿರ ಹೊದಿಕೆಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಮೂಲಕ ವಿತರಿಸಲಾಗಿದೆ.
ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಿರಾಶ್ರಿತರಿಗೆ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ನೀಡಿದ ಚಾದರಾ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಗೋಕಾಕ್ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಕೇಶವ ದೇವಾಂಗ , ತಾಲೂಕಿನ ಯೋಜನಾಧಿಕಾರಿ ಭಾರತಿ ಪಟಗಾರ, ಜಿಲ್ಲೆಯ ಯೋಜನಾಧಿಕಾರಿ ಪ್ರವೀಣ್ ಕುಮಾರ್, ಒಕ್ಕೂಟದ ಅಧ್ಯಕ್ಷರು, ಮೇಲ್ವಿಚಾರಕರು ಶಾಲೆಯ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.

Advertisement
Advertisement

ಗೋಕಾಕ್ ತಾಲೂಕಿನಲ್ಲಿ 6 ಕಡೆಗಳಲ್ಲಿ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ 410 ಕುಟುಂಬಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಚಾದರಾ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಗೋಕಾಕ್ ಜಿಲ್ಲೆಯ ಮಾನ್ಯ ನಿರ್ದೇಶಕರಾದ ಶ್ರೀ ಕೇಶವ ದೇವಾಂಗ , ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರು ಸೋಮಶೇಖರ ಮಗದುಮ ರವರು ,ಗೋಕಾಕ್ ತಾಲೂಕಿನ ನಗರಸಭೆ ಕಮಿಷನರ್  ಶಿವಾನಂದ ಹಿರೇಮಠ್ ರವರು ಗೋಕಾಕ್ ಜಿಲ್ಲೆಯ ಯೋಜನಾಧಿಕಾರಿ ಪ್ರವೀಣಕುಮಾರ್ ರವರು ಗೋಕಾಕ್ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಮಮತಾ ಎನ್ ರವರು ಉಪಸ್ಥಿತರಿದ್ದರು.

Advertisement

ಸವದತ್ತಿ ತಾಲ್ಲೂಕಿನ ಮುನವಳ್ಳಿ ಆರ್ಟ್ಗಲ್ ಬಸರಗಿ ಗ್ರಾಮಗಳು ನೆರೆ ಹಾವಳಿಯಲ್ಲಿ ಸಿಲುಕಿದ್ದು, ಆ ಗ್ರಾಮಗಳಿಗೆ ಭೇಟಿ ಮಾಡಿ ಕ್ಷೆತ್ರದಿಂದ ಕೊಟ್ಟಿರುವ ಬೆಡ್ ಶೀಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸುಧೀರ್ ಪತ್ತಾರ, ಊರಿನ ಗಣ್ಯರು ಗ್ರಾಮ ಪಂಚಾಯತ್ ಸದಸ್ಯರು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತಿ ಇದ್ದು , ಜನರಿಗೆ ಸಾಂತ್ವನ ಹೇಳಲಾಯಿತು.
ರಾಮದುರ್ಗ ತಾಲೂಕಿನ ಗ್ರಾಮಗಳು ನೆರೆ ಹಾವಳಿಯಲ್ಲಿ ಸಿಲುಕಿದ್ದು, ಆ ಗ್ರಾಮಕ್ಕೆ ಬೇಟಿ ಕೊಟ್ಟು ಎಪಿಎಂಸಿ ನಿರಾಶ್ರಿತರ ಕೇಂದ್ರದಲ್ಲಿ ಚಾದರ ವಿತರಣೆ ಮಾಡಲಾಯಿತು.

ಸರ್ಕಾರ ತೆಗೆದುಕೊಂಡ ಪರಿಹಾರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೆರೆ ಸಂತ್ರಸ್ತರ ಬಗ್ಯೆ ಸರ್ಕಾರದಿಂದ ಅಧಿಕೃತ ಮಾಹಿತಿ ಪಡೆದು ಧರ್ಮಸ್ಥಳದಿಂದ ಸೂಕ್ತ ಪರಿಹಾರದ ಬಗ್ಯೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಕಛೇರಿಯಲ್ಲಿ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್, ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಮತ್ತು ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಲೆನಾಡ ಗಿಡ್ಡ ತಳಿಯ ಗೋರಕ್ಷಣೆ ಅನಿವಾರ್ಯತೆ ಏಕೆ..? | ಅವುಗಳ ಮಹತ್ವ ಏನು ? ಜೀವಾಮೃತದಿಂದ ಅಡಿಕೆ ತೋಟ ಏನಾಯ್ತ..?
April 30, 2024
2:28 PM
by: ಮುರಳಿಕೃಷ್ಣ ಕೆ ಜಿ
Karnataka Weather | 30-04-2024 | ರಾಜ್ಯದಲ್ಲಿ ಮೋಡದ ವಾತಾವರಣ | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
April 30, 2024
11:19 AM
by: ಸಾಯಿಶೇಖರ್ ಕರಿಕಳ
ಕೋವಿಡ್‌ ಲಸಿಕೆ ವಿರಳವಾಗಿ ಟಿಟಿಎಸ್‌ಗೆ ಕಾರಣವಾಗುತ್ತದೆ..! | ಕೋವಿಶೀಲ್ಡ್ ‘ಅಪರೂಪದ ಅಡ್ಡ ಪರಿಣಾಮ’ ಬೀರಬಹುದು | ಲಂಡನ್ ಕೋರ್ಟ್‌ಗೆ ಅಸ್ಟ್ರಾಜೆನೆಕಾ ಅಫಿಡವಿಟ್ ಸಲ್ಲಿಕೆ |
April 30, 2024
11:04 AM
by: The Rural Mirror ಸುದ್ದಿಜಾಲ
ಭಾರತವನ್ನು ಹೊಗಳಿದ ಪಾಕ್‌ ನಾಯಕ | ಭಾರತ ಸೂಪರ್ ಪವರ್ ಆಗುವ ಕನಸು ಕಾಣುತ್ತಿದ್ರೆ, ನಾವು ಭಿಕ್ಷೆ ಬೇಡುತ್ತಿದ್ದೇವೆ – ಫಜ್ಲುರ್ ರೆಹಮಾನ್
April 30, 2024
10:46 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror