ಪಂಜ: ಐವತ್ತೊಕ್ಲು,ಕೂತ್ತುಂಜ,ಕೇನ್ಯ,ಬಳ್ಪ,ಪಂಬೆತ್ತಾಡಿ ಮತ್ತು ಕರಿಕ್ಕಳ ವ್ಯಾಪ್ತಿಯ ವಿದ್ಯುತ್ ಬಳಕೆದಾರರ ವೇದಿಕೆಯನ್ನು ರಚಿಸಲಾಗಿ ರಚಿಸಲಾಯಿತು. ಸಮಿತಿ ಸಂಚಾಲಕರಾಗಿ ನ್ಯಾಯವಾದಿ ಶಂಕರ ಕುಮಾರ್ ಮುಚ್ಚಿಲ ಆಯ್ಕೆಯಾದರು.
ಪಂಜ ಕೃಷಿ ಸಹಕಾರಿ ಸಂಘದ ಸಭಾಂಗಣದಲ್ಲಿಸಭೆ ನಡೆಯಿತು. ಸಮಿತಿಯ ಸಹ ಸಂಚಾಲಕರಾಗಿ ಲಿಗೋದರ ಆಚಾರ್ಯ, ಖಜಾಂಜಿಯಾಗಿ ಚಂದ್ರಶೇಖರ ಶಾಸ್ತ್ರೀ ಮತ್ತು 15 ಜನ ಸದಸ್ಯರೊಳಗೊಂಡ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ವಿದ್ಯುತ್ ಸಮಸ್ಯೆ ಮತ್ತು ಪಂಜದಲ್ಲಿ 33 ಕೆ ವಿ ವಿದ್ಯುತ್ ಪರಿವರ್ತಕ ಸ್ಥಾಪಿಸಲು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಾಗೂ ವಿವಿಧ ಜನಪ್ರತಿನಿಧಿಗಳ ಮನವಿಯ ಮೂಲಕ ಮೆಸ್ಕಾಂಗೆ ಮನವಿಯನ್ನು ಸಲ್ಲಿಸುವುದೆಂದು ತೀರ್ಮನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅದ್ಯಕ್ಷರಾದ ಸಿ ಚಂದ್ರಶೇಖರ ಶಾಸ್ತ್ರೀ ವಹಿಸಿದ್ದರು. ಶಿವರಾಮಯ್ಯ ಕರ್ಮಜೆ ಪ್ರಾಸ್ತಾವಿಕ ಮಾತನಾಡಿದರು. ಪಂಜ ಗ್ರಾಮಪಂಚಾಯತ್ ಅದ್ಯಕ್ಷ ಕಾರ್ಯಪ್ಪ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಿತಿ ಸದಸ್ಯರುಗಳಾಗಿ ಪಟೋಳಿ ಕೃಷ್ಣ ಭಟ್, ಕುಳ ಸುಬ್ರಹ್ಮಣ್ಯ, ವಿಶ್ವೇಶ್ವರ ಭಟ್ ಜತ್ತಿಲ, ಶ್ರಧ್ದಾ ಲಲಿತ್ ರೈ, ರಘುನಾಥ್ ರೈ ಕೇನ್ಯ, ಕಣ್ಕಲ್ಲು ಸುಬ್ರಹ್ಮಣ್ಯ, ಪುರುಷೋತ್ತಮ ಮುಡೂರು, ಚಿನ್ನಪ್ಪ ಚೊಟ್ಟೆಮಜಲು, ಶಂಕರ ಭಟ್ ಅಡ್ಕ, ನೇಮಿರಾಜ ಕೊಟ್ಯಡ್ಕ, ವೆಂಕಟ್ರಮಣ ಭಟ್ ಸಂಗಾತಿ, ಬಾಲಕೃಷ್ಣ ಪುತ್ಯ, ಕಾರ್ಯಪ್ಪ ಗೌಡ ಚಿದ್ಗಲ್ಲು, ಶಿವರಾಮಯ್ಯ ಕರ್ಮಜೆ, ದಿಲೀಪ್ ಬಾಬ್ಲುಬೆಟ್ಟು, ವಿಜಯ ಕಂರ್ಬಿ, ಸಂತೋಷ್ ಜಾಕೆ ಅವರನ್ನು ಆಯ್ಕೆ ಮಾಡಲಾಯಿತು.
ಲಿಗೋಧರ ಆಚಾರ್ಯ ವಂದಿಸಿದರು.