ಪಂಜದಲ್ಲಿ ವ್ಯಕ್ತಿ ನಾಪತ್ತೆ: ನೀರು ಪಾಲಾಗಿರುವ ಸಂದೇಹ , ಮುಂದುವರಿದ ಶೋಧಕಾರ್ಯ

September 5, 2019
9:00 AM

ಪಂಜ: ಅನಾರೋಗ್ಯ ಹಿನ್ನಲೆಯಲ್ಲಿ ಔಷಧಿ ತರಲೆಂದು ಪೇಟೆಗೆ ತೆರಳಿದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಪಂಜ ಸಮೀಪದ ಕೂತ್ಕುಂಜ ಗ್ರಾಮದಲ್ಲಿ ಬುಧವಾರ ನಡೆದಿದೆ.
ಕೂತ್ಕುಂಜ ಕುದ್ವ ಶೇಷಪ್ಪ ಗೌಡ ನಾಪತ್ತೆಯಾದ ವ್ಯಕ್ತಿ. ಅವರು ಪಲ್ಲೋಡಿ ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದ್ದು ಈ ಹಿನ್ನಲೆಯಲ್ಲಿ ಬುಧವಾರ ಪಂಜದ ಹೊಳೆಯಲ್ಲಿ ಅವರ ಹುಡುಕಾಟ ನಡೆಯಿತು.

Advertisement
Advertisement
Advertisement

ಮಂಗಳವಾರ ಶೇಷಪ್ಪ ಗೌಡರು ಮೈ ಹುಷಾರಿಲ್ಲ ಎಂದು ಮನೆಯವರಲ್ಲಿ ಹೇಳಿ ಪಂಜ ಪೇಟೆಗೆ ತೆರಳಿದ್ದರು. ಬಳಿಕ ಅವರು ಮರಳಿ ಮನೆಗೆ ಬಂದಿರಲಿಲ್ಲ. ಅವರನ್ನು ಹುಡುಕುತ್ತ ಮಗ ಪಂಜದ ಕಡೆ ಹೊರಟಿದ್ದರು. ಕಾಲು ದಾರಿಯಲ್ಲಿ ಹುಡುಕುತ್ತ ಹೋಗುತಿದ್ದಾಗ ತೋಟದ ಪಕ್ಕ ಹರಿಯುವ ತೋಡಿಗೆ ಹಾಕಿದ್ದ ಮರದ ಪಾಲದ ಬದಿಗೆ ಅಳವಡಿಸಿದ ಅಡ್ಡ ತುಂಡಾಗಿ ಬಿದ್ದಿರುವುದು ಕಂಡು ಬಂದಿತ್ತು. ಸಂಶಯಗೊಂಡು ಹುಡುಕಾಟ ನಡೆಸಿದಾಗ ತೋಡಲ್ಲಿ ಅವರ ಚಪ್ಪಲಿ ಪತ್ತೆಯಾಗಿತ್ತು.

Advertisement

ಅವರು ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿರುವ ಶಂಕೆ  ಹಿನ್ನಲೆಯಲ್ಲಿ ರಾತ್ರಿಯೇ ಗ್ರಹರಕ್ಷಕ ದಳದವರನ್ನು ಹಾಗೂ ಮುಳುಗು ತಜ್ಞರನ್ನು ಕರೆಯಿಸಿ ಬುಧವಾರ ಹುಡುಕಾಟ ನಡೆಸಲಾಯಿತು. ಸಂಜೆ ತನಕವೂ ಯಾವುದೇ ಸುಳಿವು ದೊರಕಿಲ್ಲ. ಸ್ಥಳಕ್ಕೆ ಸುಳ್ಯ ತಹಶೀಲ್ದಾರ್ ಕುಂಞ ಅಹಮ್ಮದ್ ಭೇಟಿ ನೀಡಿ ಮಾಹಿತಿ ಪಡೆದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 22-12-2024 | ಕೆಲವು ಕಡೆ ತುಂತುರು ಮಳೆ ಸಾಧ್ಯತೆ |
December 22, 2024
3:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21.12.2024 | ರಾಜ್ಯದ ಹಲವೆಡೆ ಮೋಡದ ವಾತಾವರಣ |
December 21, 2024
11:35 AM
by: ಸಾಯಿಶೇಖರ್ ಕರಿಕಳ
ಹಲಸು ಮೌಲ್ಯವರ್ಧನೆಗೆ ನೆರವು | ಹಲಸು ಉದ್ಯಮದ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡ ಒಡಿಶಾ |
December 21, 2024
6:50 AM
by: The Rural Mirror ಸುದ್ದಿಜಾಲ
ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸಿದ ಸರ್ಕಾರ | 422 ರೂಪಾಯಿ ಏರಿಕೆ |
December 21, 2024
6:32 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror