ಪತ್ರಕರ್ತರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾ ಕಾರ್ಯಕ್ರಮ.

July 20, 2019
12:32 PM

ಸುಳ್ಯ. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಪ್ರೌಢ ಶಾಲೆ, ಪದವಿಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ದಿ.ಅಬ್ದುಲ್ ಸತ್ತಾರ್ ಗೋರಡ್ಕ ಮತ್ತು ದಿ. ವೆಂಕಟ್ ಮೋಂಟಡ್ಕ ಸ್ಮರಣಾರ್ಥ ವಿವಿಧ ಸ್ಪರ್ಧಾ ಕಾರ್ಯಕ್ರಮ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಸುಳ್ಯ ಎಪಿಎಂಸಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪತ್ರಿಕೆಗಳ ಮೂಲಕ ಸಮಾಜದಲ್ಲಿ ಬದಲಾವಣೆ ಮತ್ತು ಸಮಾಜದ ಪ್ರಗತಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಯಾವುದೇ ವ್ಯಕ್ತಿ‌ ಅಥವಾ ಸಂಘಟನೆ ಯಾವುದೇ ಉತ್ತಮ ಕೆಲಸ ಸಾಧನೆ ಮಾಡಿದರೆ ಪತ್ರಿಕೆಗಳ ಮೂಲಕ ಪ್ರಚಾರ ಪಡೆದು ನಾಲ್ಕಾರು ಜನರಿಗೆ ಮುಟ್ಟಿದರೆ ಮಾತ್ರ ಅವರ ಸಾಧನೆ ಸಾರ್ಥಕವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ‌.ಮಹದೇವ್ ಮಾತನಾಡಿ ಪತ್ರಿಕಾ ಕ್ಷೇತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಪಾಯ ಎಂದರು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಪತ್ರಿಕೆಗಳು ಅನಿವಾರ್ಯ. ಅಂತರ್ಜಾಲದಲ್ಲಿ ಎಷ್ಟೇ ಮಾಹಿತಿ ಬಂದರೂ ಅದು ಕ್ಷಣಿಕವಾದುದು. ನಿರಂತರ ಓದುವ ಹವ್ಯಾಸದಿಂದ ಮಾತ್ರ ಮಾಹಿತಿಗಳು ಸ್ಮೃತಿಪಟಲದಲ್ಲಿ ಉಳಿದು ಜ್ಞಾನ ವೃದ್ಧಿಯಾಗಲು ಸಾಧ್ಯ. ಪತ್ರಿಕೆಗಳಲ್ಲಿ ಬರುವ ಅಧ್ಯಯನಾತ್ಮಕ ಲೇಖನಗಳನ್ನು ಸಂಗ್ರಹಿಸಿ ಅದನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಶಿಕ್ಷಕರಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

Advertisement
Advertisement
Advertisement

ಇನ್ನೊರ್ವ ಮುಖ್ಯ ಅತಿಥಿಯಾಗಿದ್ದ ಎಪಿಎಂಸಿ ಉಪಾಧ್ಯಕ್ಷ ಸಂತೋಷ್ ಜಾಕೆ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುದ್ರಣ ಮಾಧ್ಯಮ ಸರ್ವ ವ್ಯಾಪಿಯಾಗಿದ್ದು ಅದಕ್ಕೆ ಮಾತ್ರ ಉತ್ತಮ ಭವಿಷ್ಯವಿದೆ. ಪತ್ರಿಕೆಗಳ ಓದುಗರು ಕಡಿಮೆಯಾಗುವುದಿಲ್ಲ ಅದು ನಿರಂತರ ಏರಿಕೆಯಲ್ಲಿದೆ ಎಂಬುದು ನನ್ನ ಅನಿಸಿಕೆ ಎಂದರು.
ಅಡ್ಪಂಗಾಯ ವಿವೇಕ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಹಸೈನಾರ್ ಹಾಜಿ ಗೋರಡ್ಕ ಮುಖ್ಯ ಅತಿಥಿಯಾಗಿದ್ದು ಶುಭ ಹಾರೈಸಿದರು.
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮುರಳೀಧರ ಅಡ್ಡನಪಾರೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ತೇಜೇಶ್ವರ ಕುಂದಲ್ಪಾಡಿ, ಕಾರ್ಯದರ್ಶಿ ಗಿರೀಶ್ ಅಡ್ಪಂಗಾಯ, ಕೋಶಾಧಿಕಾರಿ ಸತೀಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಗಂಗಾಧರ ಮಟ್ಟಿ ಸ್ವಾಗತಿಸಿ, ಜಯಪ್ರಕಾಶ್ ಕುಕ್ಕೆಟ್ಟಿ ಪ್ರಸ್ತಾವನೆಗೈದರು, ಶಿವಪ್ರಸಾದ್ ಕೇರ್ಪಳ ವಂದಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

Advertisement

ವಿವಿಧ ಸ್ಪರ್ಧೆಗಳು:

ಪ್ರೌಡಶಾಲಾ ವಿದ್ಯಾರ್ಥಿಗಳಿಗೆ ‘ಜಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ‘ ವಿಷಯದಲ್ಲಿ ಪ್ರಬಂಧ ಸ್ಪರ್ಧೆ, ಪದವಿಪೂರ್ವ ವಿದ್ಯಾರ್ಥಿಗಳಿಗೆ ‘ಪ್ರಜಾಪ್ರಭುತ್ವದ ಆಶಯಗಳು ಮತ್ತು ಪ್ರಸಕ್ತ ರಾಜಕೀಯ’ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ಮತ್ತು ಪದವಿ ವಿದ್ಯಾರ್ಥಿಗಳಿಗೆ ‘ಮೋಕ್ ಪ್ರೆಸ್’ ಎಂಬ ವಿನೂತನ ಸ್ಪರ್ಧೆ ನಡೆಯಿತು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಬೆಳೆಗಾರರು ಏಕೆ ಜಾಗ್ರತರಾಗಬೇಕಿದೆ..?
January 22, 2025
6:48 AM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕಾಲಾವಧಿ ನೇಮ
January 21, 2025
3:55 PM
by: ದ ರೂರಲ್ ಮಿರರ್.ಕಾಂ
ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಸಿರಿಧಾನ್ಯ  ಬಳಕೆ  ಕುರಿತು  ಕೃಷಿ ಇಲಾಖೆಯಿಂದ  ಸಿರಿಧಾನ್ಯ ಓಟ
January 19, 2025
10:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror