ಪಶ್ಚಿಮ ಬಂಗಾಳದಲ್ಲಿ ಗುಟ್ಕಾ ನಿಷೇಧ ಮುಂದುವರಿಕೆ

November 7, 2019
2:44 PM

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ  ಗುರುವಾರದಿಂದ ಗುಟ್ಕಾ ಮಾರಾಟ ನಿಷೇಧ ಮುಂದುವರಿದಿದೆ. ಮಮತಾ ಬ್ಯಾನರ್ಜಿ ಸರಕಾರವು ಪಶ್ಚಿಮ ಬಂಗಾಳದಲ್ಲಿ 2013ರಲ್ಲಿ ಮೊದಲ ಬಾರಿಗೆ ಗುಟ್ಕಾ ಮತ್ತು ಪಾನ್ ಮಸಾಲಾಗಳ ಮೇಲೆ ನಿಷೇಧ ಹೇರಿತ್ತು. 5 ವರ್ಷಗಳ ಬಳಿಕ ಮತ್ತೆ ಇನ್ನೂ ಒಂದು ವರ್ಷದ ಅವಧಿಗೆ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟದ ಮೇಲಿನ ನಿಷೇಧವನ್ನು ವಿಸ್ತರಿಸಿದೆ.ರಾಜ್ಯದಲ್ಲಿ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪಶ್ಚಿಮ ಬಂಗಾಳದ ಆಹಾರ ಮತ್ತು ಕುಟುಂಬ ಇಲಾಖೆಯ ಆಹಾರ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ರಾಜ್ಯದಲ್ಲಿ ನಿಕೋಟಿನ್ ಹೊಂದಿರುವ ಸಿಗರೇಟ್ ಉತ್ಪನ್ನಗಳ ಮೇಲೆ ನಿಷೇಧ ವಿಧಿಸಿಲ್ಲ.

2013 ರಲ್ಲಿ  ಬಹುತೇಕ ರಾಜ್ಯಗಳು ಗುಟ್ಕಾ ನಿಷೇಧಕ್ಕೆ ಮುಂದಾಗಿದ್ದವು. ಈ ಸಂದರ್ಭ ಮಮತಾ ಬ್ಯಾನರ್ಜಿ ಸರಕಾರವ ಮೊದಲ ಬಾರಿಗೆ ಗುಟ್ಕಾ ನಿಷೇಧ ಮಾಡಿತ್ತು. ಬಳಿಕ  ಬಿಹಾರ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ರಾಜಸ್ಥಾನ ನಿಷೇಧ ಮಾಡಿದರೆ 2013ರಲ್ಲಿ ರಾಜ್ಯದಲ್ಲೂ ಗುಟ್ಕಾ ನಿಷೇಧ ಮಾಡಲಾಗಿತ್ತು, ಬಳಿಕ ತೀವ್ರ ಪ್ರತಿಭಟನೆ ಹಾಗೂ ಹೋರಾಟದ ಫಲವಾಗಿ ನಿಷೇಧವನ್ನು ಹಿಂಪಡೆಯಲು ತೀರ್ಮಾನಿಸಲಾಗಿತ್ತು. ತಂಬಾಕು ಮತ್ತು ಗುಟ್ಕಾ ಉತ್ಪನ್ನಗಳ ಪ್ರತ್ಯೇಕ ಮಾರಾಟಕ್ಕೆ ಅವಕಾಶ ನೀಡಲಾಗಿದೆ.

ಈಗಾಗಲೇ ತಂಬಾಕು, ನಿಕೋಟಿನ್, ಮ್ಯಾಗ್ನೇಷಿಯಂ ಕಾರ್ಬೊನೇಟ್ ಮತ್ತು ಮಿನರಲ್ ಆಯಿಲ್ ಹೊಂದಿರುವ ಪಾನ್ ಮಸಾಲಾಗಳನ್ನು ಸಂಪೂರ್ಣವಾಗಿ ನಿಷೇಧಿಸಿವೆ. ಒಟ್ಟು 24 ರಾಜ್ಯಗಳಲ್ಲಿ ಈ ನಿಷೇಧ ಭಾಗಶಃ ಜಾರಿಯಲ್ಲಿದೆ.

 

Advertisement

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಾರ್ಚ್ 19 ರಿಂದ 5 ರಾಶಿಗಳಿಗೆ ವಿಶೇಷ ಶುಭ ಸೂಚನೆ
March 19, 2025
6:41 AM
by: ದ ರೂರಲ್ ಮಿರರ್.ಕಾಂ
ನಗುವಿನೊಂದಿಗೆ ಭೂಮಿಗೆ ಇಳಿದ ಗಗನಯಾತ್ರಿ ಸುನಿತಾ ವಿಲಿಯಮ್ಸ್
March 19, 2025
6:22 AM
by: The Rural Mirror ಸುದ್ದಿಜಾಲ
ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|
March 18, 2025
9:52 PM
by: ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ
ಚಿಕ್ಕಮಗಳೂರು ಜಿಲ್ಲೆ | ಮಂಗನ ಕಾಯಿಲೆ ಸೋಂಕಿಗೆ ವೃದ್ಧೆ ಬಲಿ | ಮಂಗನಕಾಯಿಲೆ ಬಗ್ಗೆ ಇರಲಿ ಎಚ್ಚರ |
March 18, 2025
8:31 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror