ಪಿಡಿಒಗಳು ಸರಿ ಇಲ್ಲ : ಸಚಿವ ಸೋಮಣ್ಣ ಟೀಕೆ

September 24, 2019
10:56 AM

ಮಡಿಕೇರಿ: ಗಿರಿಜನ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸಾಕಷ್ಟು ಅನುದಾನವಿದ್ದು, ಅದನ್ನು ಕ್ರಮಬದ್ಧವಾಗಿ ಅನುಷ್ಟಾನಗೊಳಿಸುವಂತೆ ಸಚಿವ ಸೋಮಣ್ಣ ಅವರು ಐಟಿಡಿಪಿ ಇಲಾಖಾ ಅಧಿಕಾರಿಗೆ ಸ್ಪಷ್ಟ ನಿರ್ದೇಶನ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಐಟಿಡಿಪಿ ಅಧಿಕಾರಿ, ಆಯಾ ಗ್ರಾಪಂ ಪಿಡಿಒಗಳ ಸಭೆ ನಡೆಸಿ ಆಗಬೇಕಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಸೋಮಣ್ಣ ಅವರು ‘ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಎನ್ನುವ ಹುದ್ದೆಯಾದರು ಏಕಿದೆ? ಪಿಡಿಒಗಳು ಎಂದರೆ ಪಿಶಾಚಿಗಳು. ಇರುವ ಪಿಡಿಒಗಳಲ್ಲಿ ಕೆಲವು ಮಂದಿ ಮಾತ್ರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರಷ್ಟೆ’ ಎಂದು ಟೀಕಿಸಿದರು.

ವಿರಾಜಪೇಟೆಯ ದೇವಮಚ್ಚಿ ಅರಣ್ಯ ಭಾಗವನ್ನು ನಾಗರಹೊಳೆ ವನ್ಯಜೀವಿ ವಲಯಕ್ಕೆ ಸೇರ್ಪಡೆಗೊಳಿಸುವ ಪ್ರಸ್ತಾಪದ ಬಗ್ಗೆ ಗಮನ ಸೆಳೆದ ಶಾಸಕ ಕೆ.ಜಿ.ಬೋಪಯ್ಯ ಅರಣ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅನಾದಿ ಕಾಲದಿಂದಲು ಮೂಲನಿವಾಸಿಗಳು ದೇವಮಚ್ಚಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಆ ಪ್ರದೇಶವನ್ನು ವನ್ಯಜೀವಿ ವಲಯಕ್ಕೆ ಸೇರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಗಿರಿಜನರಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲು ಅಡ್ಡಿಯುಂಟು ಮಾಡುತ್ತಿರುವ ಅರಣ್ಯ ಅಧಿಕಾರಿಗಳಿಗೆ ಇನ್ನು ಮುಂದೆ ನೀರು ಮತ್ತು ವಿದ್ಯುತ್ ಸೌಲಭ್ಯವನ್ನು ಇಲ್ಲದಂತೆ ಮಾಡಬೇಕೆಂದರು. ಶಾಸಕ ಅಪ್ಪಚ್ಚು ರಂಜನ್ ಅವರು, ಕಾಡಾನೆಗಳೊಂದಿಗೆ ಕಾಡು ಹಂದಿ ಕೂಡ ದಾಳಿ ಮಾಡಿ ಬೆಳೆ ನಾಶಪಡಿಸುತ್ತಿದೆ. ಈ ಬಗ್ಗೆ ರೈತರು ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಮುಂದಾದರೆ ಅದಕ್ಕೂ ಅರಣ್ಯ ಅಧಿಕಾರಿಗಳು ಅವಕಾಶ ನೀಡದೆ ಪ್ರಕರಣ ದಾಖಲಿಸುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದರು.

ದಕ್ಷಿಣ ಕೊಡಗಿನ ಗ್ರಾಮೀಣ ಭಾಗದಲ್ಲಿ ಬಿಎಸ್‍ಎನ್‍ಎಲ್ ನೆಟ್ ವರ್ಕ್ ಅಲಭ್ಯವಾಗಿರುವುದರಿಂದ ಖಾಸಗಿ ಸಂಸ್ಥೆಯ ಕೇಬಲ್ ಅಳವಡಿಕೆಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೆ, ಅರಣ್ಯ ಅಧಿಕಾರಿಗಳು ಅದಕ್ಕೂ ಅವಕಾಶವನ್ನು ನೀಡುತ್ತಿಲ್ಲ. ಇನ್ನು ಮುಂದಾದರು ಅದಕ್ಕೆ ಅವಕಾಶ ಕೊಡಬೇಕು. ಗ್ರಾಮೀಣ ಭಾಗಗಳಲ್ಲಿ ಪ್ರಾಕೃತಿಕ ವಿಕೋಪದಂತಹ ಘಟನೆಗಳ ಸಂದರ್ಭ ಇತರರನ್ನು ಸಂಪರ್ಕಿಸುವ ಸಲುವಾಗಿಯಾದರು ಮೊಬೈಲ್ ಸಂಪರ್ಕ ಅತ್ಯವಶ್ಯ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಈ ಸಂದರ್ಭ ಸಚಿವ ಸೋಮಣ್ಣ ಮಾತನಾಡಿ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಮತ್ತು ಗೊಂದಲಗಳನ್ನು ಬಗೆಹರಿಸಲು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

Advertisement

ಜಿಲ್ಲೆಯಲ್ಲಿ ಯಾವುದೇ ಭೂಮಿಯನ್ನು ಮನಸೋ ಇಚ್ಛೆ ಪರಿವರ್ತನೆ ಮತ್ತು ನೋಂದಣಿ ಮಾಡಬೇಡಿ ಎಂದು ರಿಜಿಸ್ಟ್ರಾರ್ ಮತ್ತು ಕಂದಾಯ ಇಲಾಖಾಧಿಕಾರಿಗಳಿಗೆ ಸೂಚನೆ ನೀಡುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲೆಯಲ್ಲಿ ಕಾಫಿ ಸೇರಿದಂತೆ ಎಲ್ಲ ಬೆಳೆಗಳು ನಾಶವಾಗಿದೆ. ಆದಾಯದ ಮೂಲವೇ ಇಲ್ಲದಾಗಿದ್ದು, ಭೂ ಪರಿವರ್ತನೆ ಬೇಡವೆಂದರೆ ಬದುಕುವುದಾದರು ಹೇಗೆಂದು ಪ್ರಶ್ನಿಸಿದರು. ಮನೆಗಳ ನಿರ್ಮಾಣಕ್ಕೂ ಅವಕಾಶ ನೀಡದಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸಭೆಯಲ್ಲಿ ಎಂಎಲ್‍ಸಿ ವೀಣಾ ಅಚ್ಚಯ್ಯ, ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಎಸ್‍ಪಿ ಡಾ.ಸುಮನ್ ಡಿ. ಪನ್ನೇಕರ್, ಸಿಇಒ ಲಕ್ಷ್ಮೀಪ್ರಿಯ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೂ ಮೊದಲು ಶಾಸಕರು ಸಚಿವ ವಿ.ಸೋಮಣ್ಣ ಅವರನ್ನು ಸನ್ಮಾನಿಸಿ ಕೊಡಗಿನ ಸಾಂಪ್ರದಾಯಿಕ ವಡಿಕತ್ತಿ ನೀಡಿ ಗೌರವಿಸಿದರು.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಮೇಘಸ್ಫೋಟ | ಮೇಘಸ್ಫೋಟದಿಂದ ದಿಢೀರ್ ಪ್ರವಾಹ-ಭೂಕುಸಿತ
August 31, 2025
10:08 PM
by: The Rural Mirror ಸುದ್ದಿಜಾಲ
ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ವಿಮೆ | ಬೆಳೆ ವಿಮೆಯಿಂದಾಗಿ ರೈತರಲ್ಲಿ ಸಂತಸ
August 31, 2025
9:59 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 31-08-2025 | ವಾಯುಭಾರ ಕುಸಿತ – ಸೆ.2 ರಿಂದ ಎಲ್ಲೆಲ್ಲಾ ಮಳೆ..?
August 31, 2025
8:55 PM
by: ಸಾಯಿಶೇಖರ್ ಕರಿಕಳ
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸದುಪಯೋಗ ಪಡಿಸಿಕೊಳ್ಳಲು  ಮಹಿಳೆಯರಿಗೆ ಕರೆ
August 31, 2025
7:16 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group