ಮಂಗಳೂರು:ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ರಾಣಿ ಎಂಬ 8 ವರ್ಷದ ಹುಲಿಯು ಐದು ಮರಿಗಳಿಗೆ ಜನ್ಮ ನೀಡಿದೆ. ಮರಿಗಳು ಅರೋಗ್ಯವಾಗಿವೆ. ರಾಣಿಯು ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಬಂದಿರುತ್ತದೆ. ಮರಿಗಳಿಗೆ ರೋಗನಿರೋಧಕ ಲಸಿಕೆ ನೀಡಿದ ನಂತರ ಸಂದರ್ಶಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು.
ವಿಶಾಖಪಟ್ಟನಂ ಮೃಗಾಲಯದಿಂದ ತರಿಸಲಾದ ಸೀಳು ನಾಯಿಯು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 3 ಮರಿಗಳಿಗೆ ಜನನ ನೀಡಿರುತ್ತದೆ. ಸಂದರ್ಶಕರಿಗೆ ತಾಯಿ ಮತ್ತು ಮರಿಗಳನ್ನು ನೋಡುವ ಅವಕಾಶ ಕಲ್ಪಿಸಿಕೊಡಲಾಗಿದೆ.
Advertisement
Advertisement
ಪ್ರಾಣಿ ವಿನಿಮಯ ಕಾರ್ಯಕ್ರಮ :ತಿರುವನಂತಪುರಂ ಮೃಗಾಲಯದಿಂದ ರಿಯಾ ಪಕ್ಷಿ ಹಾಗೂ ತಿರುಪತಿ ಮೃಗಾಲಯದಿಂದ ಬಿಳಿ ಹುಲಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗುವುದು ಎಂದು ಹೆಚ್.ಜೆ ಭಂಡಾರಿ, ನಿರ್ದೇಶಕರು ಪಿಲುಕುಲ ಜೈವಿಕ ಉದ್ಯಾನವನ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement