ಬೆಳ್ಳಾರೆ: ಮಂಗಳೂರಿನಲ್ಲಿ ನಡೆದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‍ನ 26ನೇ ಘಟಿಕೋತ್ಸವದಂದು ಡಾ| ಕರುಣಾಕರ.ಎ ಕೋಟೆಗಾರ್ ಮಾರ್ಗದರ್ಶನದಲ್ಲಿ ರಾಮಕೃಷ್ಣ ಮುಂಡುಗಾರು ಕೈಗೊಂಡಿದ್ದ ಸ್ಕೇಲೇಬಲ್ ವೀಡಿಯೊ ಅಡಾಪ್ಟೇಷನ್ ಯೂಸಿಂಗ್ ಮೀಡಿಯಾ ಎವೆರ್ ನೆಟ್ವರ್ಕ್ ಎಲಿಮೆಂಟ್ಸ್ ಎಂಬ ಮಹಾಪ್ರಬಂಧಕ್ಕೆ ಪಿಹೆಚ್‍ಡಿ ಪದವಿ ಪ್ರಧಾನಿಸಿ ಗೌರವಿಸಲಾಯಿತು.
ರಾಮಕೃಷ್ಣರು ಪೋಸ್ಟ್ ಡಾಕ್ಟರಲ್ ಫೆಲೊ ವಿಷಯದ ಕುರಿತು 2 ವರ್ಷದ ಮಹಾ ಸಂಶೋಧನೆಯನ್ನು ಯುನೈಟೆಡ್‍ಕಿಂಗ್ಡಮ್‍ನ ಬಾತ್ ವಿಶ್ವವಿದ್ಯಾಲಯದ ಮೂಲಕ ನಡೆಸುವ ಗುರಿ ಹೊಂದಿದ್ದಾರೆ. ಇವರು ಸ.ಹಿ.ಪ್ರಾ ಶಾಲೆ ಕೋಟೆಮುಂಡುಗಾರು ಹಾಗೂ ವಿದ್ಯಾಬೋಧಿನಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದು, ಕಳಂಜ ಗ್ರಾಮದ ಮುಂಡುಗಾರು ಸುಬ್ರಹ್ಮಣ್ಯ ಮತ್ತು ವಿಜಯಲಕ್ಷ್ಮೀ ಎಂ.ಎಸ್‍ರ ಸುಪುತ್ರ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel