ಪುತ್ತೂರು: ಟೆಕ್ನೋತರಂಗ್-2020 ಸಮಾರೋಪ ಸಮಾರಂಭ

January 17, 2020
6:53 PM

ಪುತ್ತೂರು: ಸ್ಪರ್ಧಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಿಗುವ ಅನುಭವಗಳು ಮುಂದೆ ಔದ್ಯೋಗಿಕ ಬೆಳವಣಿಗೆಯಲ್ಲಿ ಸಹಕಾರಿಯಾಗುತ್ತವೆ. ಬರೀ ಪುಸ್ತಕದ ವಿಚಾರಗಳನ್ನಷ್ಟೇ ಅಲ್ಲದೆ, ಇಂತಹ ಸ್ಪರ್ಧೆಗಳಿಂದ ಸಿಗುವ ಅನುಭವಗಳು ಜೀವನದ ಬೆಳವಣೆಗೆಯನ್ನು ಉನ್ನತ ಸ್ಥರಕ್ಕೆ ಏರಿಸುತ್ತದೆ ಎಂದು ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಕಾಲೇಜಿನ ಉಪಪ್ರಾಂಶುಪಾಲ ಡಾ. ನಾಗೇಶ್ ಎಚ್. ಆರ್. ಹೇಳಿದರು.

Advertisement
Advertisement
Advertisement

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಗಣಕಶಾಸ್ತ್ರ ವಿಭಾಗ ಹಾಗೂ ಐಟಿಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ಟೆಕ್ನೋತರಂಗ್-2020’ರ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಮನುಷ್ಯ ಮತ್ತು ಮನುಷ್ಯತ್ವದ ನಡುವೆ ಇರುವ ವ್ಯತ್ಯಾಸವನ್ನು ಇಂದಿನ ವಿದ್ಯಾರ್ಥಿಗಳು ಅರಿತು ನಡೆಯಬೇಕು. ಇಂದಿನ ಈ ಆಧುನಿಕ ತಂತ್ರಜ್ಞಾನಗಳೊಂದಿಗೆ ಜೀವನ ಮೌಲ್ಯಗಳು ಬಹುಮುಖ್ಯ. ತಂತ್ರಜ್ಞಾನ ಬೆರಳತುದಿಯಲ್ಲಿದ್ದರೂ ಅದನ್ನು ಸಕಾರಾತ್ಮಕವಾಗಿ ಉಪಯೋಗಿಸುವ ಬುದ್ಧಿಮತ್ತೆ ನಮ್ಮಲ್ಲಿರಬೇಕು ಎಂದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಮಾತನಾಡಿ, ಕಂಪ್ಯೂಟರ್ ವಿಜ್ಞಾನಗಳಲ್ಲಿ ಬೆಳವಣಿಗೆಯ ಜೊತೆ, ದೇಶದ ಉನ್ನತಿಯಲ್ಲೂ ನಾವುಗಳು ಗಮನಹರಿಸಬೇಕು. ಹೇಗೆ ಈ ತಂತ್ರಜ್ಞಾನವನ್ನು ದೇಶದ ಅಭಿವೃದ್ಧಿಯಲ್ಲಿ ಉಪಯೋಗಿಸಬೇಕು ಎಂಬ ಚಿಂತನೆಯನ್ನು ಯುವ ಜನತೆ ಮಾಡಬೇಕಾಗಿದೆ. ನಾವು ಹುಟ್ಟಿ ಬೆಳೆದ ಭೂಮಿಗೆ ಇದರಿಂದಾಗಿ ಏನನ್ನಾದರೂ ಕೊಟ್ಟು ಹೋಗುವ ಸವಾಲುಗಳು ನಮ್ಮ ಮುಂದಿವೆ ಎಂಬುದಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದರು. ವೇದಿಕೆಯಲ್ಲಿ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಸಂಯೋಜಕ ಗುರುಕಿರಣ್, ಸುಚಿತ್ರಾ, ಐಟಿಕ್ಲಬ್ ವಿದ್ಯಾರ್ಥಿ ಅಧ್ಯಕ್ಷ ಮನೋಜ್ ಉಪಸ್ಥಿತರಿದ್ದರು.

ಬಹುಮಾನ: 2020 ನೇ ಸಾಲಿನ ಟೆಕ್ನೋತರಂಗ್ ಸಮಗ್ರ ಪ್ರಶಸ್ತಿಗಳಲ್ಲಿ ಪ್ರಥಮ ಸ್ಥಾನವನ್ನು ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಹಾಗೂ ದ್ವಿತೀಯ ಸ್ಥಾನವನ್ನು ಎಸ್‍ಡಿಎಮ್ ಕಾಲೇಜ್ ಆಫ್ ಬ್ಯುಸಿನೆಸ್ ಮಾನೇಜ್ ಮೆಂಟ್ ಮಂಗಳೂರು ಪಡೆಯಿತು.
‘ಡಿಬೆಟ್’ನಲ್ಲಿ ಪ್ರಥಮ- ಎಸ್‍ಡಿಎಮ್ ಕಾಲೇಜು ಮಂಗಳೂರು, ದ್ವಿತೀಯ- ಆಳ್ವಾಸ್ ಕಾಲೇಜ್ ಮೂಡಬಿದಿರೆ, ‘ಪ್ರೊಡಕ್ಟ್ ಲಾಂಚ್’ನಲ್ಲಿ ಪ್ರಥಮ-ಸೈಂಟ್ ಅಲೋಷಿಯಸ್ ಕಾಲೇಜ್ ಮಂಗಳೂರು, ದ್ವಿತೀಯ- ಆಳ್ವಾಸ್ ಕಾಲೇಜ್ ಮೂಡಬಿದ್ರೆ, ‘ವೆಬ್‍ಡಿಸೈನ್’ ಸ್ಪರ್ದೆಯಲ್ಲಿ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಪ್ರಥಮ, ಶ್ರೀದೇವಿ ಕಾಲೇಜು ಮಂಗಳೂರು ದ್ವಿತೀಯ, ‘ಕೋಡಿಂಗ್’ನಲ್ಲಿ ಎಸ್‍ಡಿಎಮ್ ಕಾಲೇಜು ಮಂಗಳೂರು ಪ್ರಥಮ, ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ದ್ವಿತೀಯ, ‘ಐಟಿ ಮ್ಯಾನೇಜರ್’ ಸ್ಪರ್ದೆಯಲ್ಲಿ ಆಳ್ವಾಸ್‍ ಕಾಲೇಜ್ ಮೂಡಬಿದ್ರೆ ಪ್ರಥಮ, ಎಸ್‍ಡಿಎಮ್ ಕಾಲೇಜು ಮಂಗಳೂರು ದ್ವಿತೀಯ, ’ಐಒಟಿ’ಯಲ್ಲಿ ಭಂಡಾರ್‍ಕಾರ್ಸ್ ಆರ್ಟ್ಸ್ ಎಂಡ್ ಸೈನ್ಸ್ ಕಾಲೇಜ್ ಕುಂದಾಪುರ ಪ್ರಥಮ, ಸೈಂಟ್ ಮೇರೀಸ್ ಕಾಲೇಜು ಶಿರ್ವ ದ್ವಿತೀಯ, ‘ಐಟಿಕ್ವಿಝ್’ ಸ್ಪರ್ದೆಯಲ್ಲಿ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ ಪ್ರಥಮ, ಕಣಚ್ಚೂರು ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆಂಡ್ ಸೈನ್ಸ್ ದೇರಳಕಟ್ಟೆ ದ್ವಿತೀಯ, ‘ಗೇಮಿಂಗ್’ನಲ್ಲಿ ಸೈಂಟ್ ಅಲೋಷಿಯಸ್ ಕಾಲೇಜ್ ಮಂಗಳೂರು ಪ್ರಥಮ, ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ.

Advertisement

ಭಾಗವಹಿಸಿದ ಕಾಲೇಜುಗಳು: 1.ಎಸ್‍ಡಿಎಮ್ ಕಾಲೇಜ್‍ಆಫ್ ಬ್ಯುಸಿನೆಸ್ ಮಾನೇಜ್ ಮೆಂಟ್ ಮಂಗಳೂರು, 2.ಎಸ್‍ಡಿಎಮ್ ಕಾಲೇಜ್ ಉಜಿರೆ, 3.ಸೈಂಟ್ ಅಲೋಷಿಯಸ್ ಕಾಲೇಜ್ ಮಂಗಳೂರು, 4.ಆಳ್ವಾಸ್ ಕಾಲೇಜ್ ಮೂಡಬಿದ್ರೆ, 5.ಭಂಡಾರ್‍ಕಾರ್ಸ್ ಆರ್ಟ್ಸ್ಎಂಡ್ ಸೈನ್ಸ್ ಕಾಲೇಜ್ ಕುಂದಾಪುರ, 6.ಶ್ರೀ ಭಾರತೀಕಾಲೇಜು ಮಂಗಳೂರು, 7.ಸೈಂಟ್ ಫಿಲೋಮಿನಾ ಕಾಲೇಜ್ ಪುತ್ತೂರು, 8.ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು, 9. ಸರಕಾರಿ ಪ್ರಥಮದರ್ಜೆ ಕಾಲೇಜು, ಬಲ್ಮಠ, ಮಂಗಳೂರು, 10.ಸೈಂಟ್ ಮೇರೀಸ್ ಕಾಲೇಜು ಶಿರ್ವ, 11.ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಟ್ಟಂಪಾಡಿ, 12.ಕಾರ್ಮೆಲ್ ಕಾಲೇಜು ಮೊಡಂಕಾಪು, 13.ಎಫ್‍ಎಮ್‍ಕೆಎಮ್‍ಸಿಸಿ ಮಡಿಕೇರಿ, 14. ಸರಕಾರಿ ಪ್ರಥಮ ದರ್ಜೆ ಕಾಲೇಜು, ಉಪ್ಪಿನಂಗಡಿ, 15. ಪೂರ್ಣ ಪ್ರಜ್ನ ಕಾಲೇಜು ಉಡುಪಿ, 16.ಕಣಚ್ಚೂರು ಇನ್ಸ್ಟಿಟ್ಯೂಟ್‍ಆಫ್ ಮ್ಯಾನೇಜ್‍ಮೆಂಟ್ ಆಂಡ್ ಸೈನ್ಸ್ ದೇರಳಕಟ್ಟೆ, 17.ಸೈಂಟ್ ಆಗ್ನೇಸ್ ಕಾಲೇಜ್(ಅಟನೋಮಸ್) ಮಂಗಳೂರು 19.ಶ್ರೀದೇವಿ ಕಾಲೇಜು ಮಂಗಳೂರು, 20.ಗೋವಿಂದದಾಸ ಕಾಲೇಜು ಸುರತ್ಕಲ್, 21.ಮಹಾತ್ಮ ಗಾಂಧಿ ಮೆಮೋರಿಯಲ್ ಕಾಲೇಜು ಉಡುಪಿ, 22.ವಿಜಯಾ ಕಾಲೇಜು ಮೂಲ್ಕಿ, 23. ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ.ಡಿಕೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಈ ಬಾರಿಯ ಬಜೆಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆಗೆ 67 ಕೋಟಿ ರೂಪಾಯಿ ನಿರೀಕ್ಷೆ | ಕರ್ನಾಟಕ ಸರ್ಕಾರದಿಂದಲೂ ತನ್ನ ಪಾಲನ್ನು ಮೀಸಲಿಡಲು ಒತ್ತಾಯ |
January 24, 2025
8:57 PM
by: ದ ರೂರಲ್ ಮಿರರ್.ಕಾಂ
ವರ್ಷದ ಬಳಿಕ ಮನೆಗೆ ಸೇರಿದ ಬಿಹಾರದ ಮಹಿಳೆ | ಪುನರ್ಜನ್ಮ ನೀಡಿದ ಸಾಯಿನಿಕೇತನ ಸೇವಾಶ್ರಮ |
January 24, 2025
11:33 AM
by: ದ ರೂರಲ್ ಮಿರರ್.ಕಾಂ
ಮುಂದಿನ ವರ್ಷದಿಂದ ಎಪಿಎಂಸಿಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ
January 24, 2025
6:49 AM
by: The Rural Mirror ಸುದ್ದಿಜಾಲ
ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ |
January 23, 2025
8:49 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror