ಪುತ್ತೂರು: ಊಟದ ವಿರಾಮ ವೇಳೆ ಕಾಲೇಜು ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ಹೊರಹೋಗಬಾರದು ಎಂಬ ಕಾಲೇಜು ಆಡಳಿತದ ನಿಯಮ ಖಂಡಿಸಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಗೇಟು ಬಳಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಇತ್ತೀಚೆಗೆ ಕಾಲೇಜಿನ ಹೊರಗೆ ನಡೆದ ಘಟನೆ ಹಾಗೂ ಆ ಬಳಿಕ ವಿದ್ಯಮಾನದಿಂದ ಎಚ್ಚೆತ್ತ ಆಡಳಿತವು ವಿದ್ಯಾರ್ಥಿಗಳು ಕಾಲೇಜು ಕ್ಯಾಂಪಸ್‌ನಿಂದ ಹೊರಗಡೆ ಹೋಗದಂತೆ ಕಾಲೇಜಿನ ಪ್ರಧಾನ ಗೇಟ್‌ಗೆ ಬೀಗ ಹಾಕಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿತ್ತು. ಹೀಗಾಗಿ ಸಂಜೆಯವರೆಗೂ ವಿದ್ಯಾರ್ಥಿಗಳು ಕಾಲೇಜಿನಲ್ಲಿಯೇ ಇರಬೇಕಾಗಿತ್ತು. ಈ ನಿಯಮದಿಂದ ಜಾರಿಗೊಳಿಸಿದ ನಿಯಮದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಗೇಟ್‌ನ ಬಳಿ ಪ್ರತಿಭಟನೆ ನಡೆಸಿದರು. ಈ ನಿರ್ಧಾರ ಏಕಪಕ್ಷೀಯ ಹಾಗೂ ವಿದ್ಯಾರ್ಥಿಗಳೆಲ್ಲರನ್ನೂ ಸಂಶಯದಿಂದ ಕಾಣುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel